Election NewsKannada NewsKarnataka NewsNationalPoliticsWorld
*ಇವಳು ಡೊನಾಲ್ಡ್ ಟ್ರಂಪ್ ಮಗಳಂತೆ..!*

ಪ್ರಗತಿವಾಹಿನಿ ಸುದ್ದಿ: 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಟ್ರಂಪ್ ಗೆದ್ದ ಮರುದಿನವೇ ಪಾಕಿಸ್ತಾನದ ಯುವತಿಯೊಬ್ಬಳು ತಾನು ಡೊನಾಲ್ಡ್ ಟ್ರಂಪ್ ನ ಮಲ ಮಗಳು ಎಂದು ಹೇಳಿಕೊಂಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದೆ.
ಮಾಹಿತಿಯ ಪ್ರಕಾರ, ಇದು ಹಳೆಯ ವೀಡಿಯೋ ಆಗಿದ್ದು, ಸದ್ಯ ವೈರಲ್ ಆಗುತ್ತಿದೆ. ಇಂಟರ್ನೆಟ್ ನಲ್ಲಿ ಹುಡುಗಿಯ ವರ್ತನೆಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.
ಯುವತಿಯ ನಡೆ ಬಗ್ಗೆ ಕಾಮೆಂಟ್ ಮಾಡಿರುವ ಕೆಲವರು, ಅವಳು ಹಿಂದಿ, ಉರ್ದು ಮಾತನಾಡಿ ತಾನು ಮುಸ್ಲಿಂ ಹಾಗೂ ಪಂಜಾಬಿ ಎಂದು ಪ್ರತಿಪಾದಿಸುತ್ತಾಳೆ, ಆದರೆ ಇವಳ ತಂದೆ ಟ್ರಂಪ್ ಅಂತೆ! ಅದು ಹೇಗೆ ? ಬಹುಶಃ ಮೆಲಾನಿಯಾ ಟ್ರಂಪ್ ಈಕೆಯನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಕಳುಹಿಸಲು ಕಾರಣವಾಯಿತು ಎಂದು ನೆಟ್ಟಿಗರು ಈಕೆಯ ಕಾಲೆಳೆದಿದ್ದಾರೆ.


