Latest

ಹೆತ್ತ ತಾಯಿ ಮೇಲೆ ಜೀಪ್ ಹರಿಸಿ ಕೊಂದ ಮಗ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಹೆತ್ತ ತಾಯಿಯ ಮೇಲೆ ಮಗನೇ ಜೀಪ್ ಹರಿಸಿ ಬರ್ಬರವಾಗಿ ಹತ್ಯೆಗೈದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ.

ನಾಗಮ್ಮ (65) ಕೊಲೆಯಾದ ತಾಯಿ. ಮಗ ಹೇಮರಾಜ್ (45) ತಾಯಿಯನ್ನೇ ಕೊಲೆಗೈದ ಆರೋಪಿ. ಹಣದ ವಿಚಾರವಾಗಿ ತಾಯಿ ಮಗನ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಇಂದು ಕೂಡ ಇದೇ ವಿಚಾರವಾಗಿ ತಾಯಿ ಮಗನ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ತಾಯಿ ಮನೆಯ ಹೊರಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಟ್ರಾವಲ್ ಜೀಪ್ ನಲ್ಲಿ ಬಂದ ಮಗ ಜೀಪ್ ಡಿಕ್ಕಿ ಹೊಡೆಸಿದ್ದಾನೆ.

Home add -Advt

ಜೀಪ್ ಡಿಕ್ಕಿಯಾದ ರಭಸಕ್ಕೆ ತಾಯಿ ನಾಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಹೇಮರಾಜ್ ನನ್ನು ಬೆಟ್ಟದಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಶ್ಲೀಲ ವಿಡಿಯೋ ಕಳುಹಿಸಿ ಮಹಿಳೆಯರಿಗೆ ಪೀಡಿಸುತ್ತಿದ್ದ ಯುವಕ

Related Articles

Back to top button