Kannada NewsKarnataka NewsLatest

ಶಿವರಾತ್ರಿ ನಿಮಿತ್ತ ಆರ್ ಎಸ್ ಎಸ್ ಪಥಸಂಚಲನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿವರಾತ್ರಿ ನಿಮಿತ್ತ ಬೆಳಗಾವಿಯಲ್ಲಿ ಗುರುವಾರ ಘೋಷ ಪಥಸಂಚಲನ ನಡೆಸಿತು.

ರಾತ್ರಿ 8 ಗಂಟೆಗೆ ಆರಂಭವಾದ ಪಥ ಸಂಚಲನದಲ್ಲಿ ನೂರಾರು ಸ್ವಯಂ ಸೇವಕರು ಭಾಗವಹಿಸಿದ್ದರು.

Home add -Advt

ನಗರದ ಚನ್ನಮ್ಮ ನಗರದ ಲಕ್ಷ್ಮಿ ಟೆಂಪಲ್ ನಿಂದ ಆರಂಭವಾದ ಪಥ ಸಂಚಲನ ಟಿಳಕವಾಡಿ ಮೂಲಕ ಮಂಡೋಳಿ ರಸ್ತೆಯ ಗಣೇಶ ಮಂದಿರದವರೆಗೆ ನಡೆಯಿತು.

ಪಥಸಂಚಲನ ಸ್ವಾಗತಕ್ಕೆ ಚನ್ನಮ್ಮ ನಗರದ ಆರ್ಕಿಡ್ಸ್ ಅಪಾರ್ಟ್ ಮೆಂಟ್ ಎದುರು ಮಹಿಳೆಯರು ರಂಗವಲ್ಲಿ ಹಾಕುತ್ತಿರುವುದು

ಪಥಸಂಚಲನದ ಮಾರ್ಗದಲ್ಲಿ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ನಿಂತು ವೀಕ್ಷಿಸುತ್ತಿದ್ದರು. ಹಲವೆಡೆ ರಸ್ತೆಗಳಲ್ಲಿ ರಂಗವಲ್ಲಿ ಹಾಕಿ ಜನರು ಸ್ವಾಗತಿಸಿದರು.

 

Related Articles

Back to top button