Kannada NewsLatest

ಬೆಳಗಾವಿ: ರಿಯಲ್ ಎಸ್ಟೇಟ್ ಏಜೆಂಟ್ ನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದ್ದು, ರೀಯಲ್ ಎಸ್ಟೇಟ್ ಏಜೆಂಟ್ ಓರ್ವರನ್ನುಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ರೀಯಲ್ ಎಸ್ಟೇಟ್ ಏಜೆಂಟ್ ಸುಧೀರ್ ಕಾಂಬಳೆ (57) ಕೊಲೆಯಾದ ದುರ್ದೈವಿ. ದುಬೈನಲ್ಲಿ ವಾಸವಾಗಿದ್ದ ಸುಧೀರ್ ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ಹಿಂದೆ ಬೆಳಗಾವಿಗೆ ಬಂದು ವಾಸವಾಗಿದ್ದರು.

ತಡರಾತ್ರಿ ಬೆಳಗಾವಿ ಕ್ಯಾಂಪ್ ನಗರದ ಮನೆಗೆ ನುಗ್ಗಿದ ದುಷ್ಕರ್ಮಿಗಳು ಸುಧೀರ್ ಅವರ ಹೊಟ್ಟೆ, ಕತ್ತು, ಕೈ, ಮುಖವನ್ನು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

ವಿಮ್ಸ್ ಆಸ್ಪತ್ರೆ ದುರಂತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

https://pragati.taskdun.com/latest/bellary-vims-tragidybig-twistdr-gangadhar/

Related Articles

Back to top button