Latest

ನಟ ಸುಶಾಂತ್ ಸಿಂಗ್ ‘ಮಿಠಾಯಿ’ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮುದ್ದಿನ ನಾಯಿ ‘ಮಿಠಾಯಿ’ ತನ್ನೊಡೆಯನ ಬೆನ್ನಿಗೇ ಇಹಲೋಕ ತ್ಯಜಿಸಿದೆ.

ಸುಶಾಂತ್ ಸಿಂಗ್ ಅವರ ಸಹೋದರಿ ಪ್ರಿಯಾಂಕಾ ಸಿಂಗ್ ಟ್ವಿಟ್ಟರ್‌ನಲ್ಲಿ ಈ ಕುರಿತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

“ಇಷ್ಟು ಕಾಲ ಮಿಠಾಯಿ! ನೀನು ನಿನ್ನ ಸ್ನೇಹಿತನ ಸ್ವರ್ಗೀಯ ಪ್ರದೇಶವನ್ನು ಸೇರಿಕೊಂಡಿದ್ದೀಯೆ.. ಶೀಘ್ರದಲ್ಲೇ ಅವರನ್ನು ಸೇರಿಕೊಳ್ಳುತ್ತಿಯೆ..! ಅಲ್ಲಿಯವರೆಗೆ..  ಹೃದಯ ಮುರಿದುಹೋಗಿದೆ,” ಎಂದು ಪ್ರಿಯಾಂಕಾ ನಾಯಿಯ ಚಿತ್ರಗಳೊಂದಿಗೆ ಬರೆದಿದ್ದಾರೆ.

ಕಪ್ಪು ಸುಂದರಿ ‘ಮಿಠಾಯಿ’ಯನ್ನು ನಟ ಸುಶಾಂತ್ ಸಿಂಗ್ ಬಹು ಪ್ರೀತಿಯಿಂದ ಸಾಕಿ ಸಲಹಿದ್ದರು. ಆದರೆ 2020ರ ಜ.14ರಂದು ಸುಶಾಂತ್ ಸಿಂಗ್ ರಜಪೂತ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಅನಂತರದಲ್ಲಿ ‘ಮಿಠಾಯಿ’ ಸುಶಾಂತ್ ಅವರ ಕುಟುಂಬದವರ ಆಸರೆಯಲ್ಲಿ ಬದುಕಿತ್ತು.

Home add -Advt

ಗರ್ಭಿಣಿಯಾಗಿದ್ದೇ ಮುಳುವಾಯ್ತು ನವ ವಿವಾಹಿತೆ ಪಾಲಿಗೆ

https://pragati.taskdun.com/husband-arrested-on-charges-of-murdering-pregnant-wife/

*ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಕೇಸ್ ದಾಖಲು*

https://pragati.taskdun.com/santro-ravione-more-case-filemysore/

 

https://pragati.taskdun.com/son-also-liable-for-fathers-debt-high-court-orders-repayment/

Related Articles

Back to top button