Belagavi News
10 hours ago
*ಸಾಂಬ್ರಾ ಗ್ರಾಮದಲ್ಲಿ ನೂತನ ಬೀದಿ ದೀಪ ಹಾಗೂ ನಾಮಫಲಕ ಉದ್ಘಾಟನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆಯಾಗಿ ಸಾಂಬ್ರಾ ಗ್ರಾಮದಲ್ಲಿ ನೂತನವಾಗಿ ಅಳವಡಿಸಲಾಗಿರುವ ಬೀದಿ ದೀಪಗಳು ಹಾಗೂ “ಐ…
Education
10 hours ago
*ಕಾನೂನುವ್ಯಾಸಂಗಕ್ಕೆಅಣಕುನ್ಯಾಯಾಲಯಸ್ಪರ್ಧೆಅಡಿಪಾಯ : ಜ್ಯೋತಿ ಎಂ.*
ಬೆಳಗಾವಿ ಆರ್.ಎಲ್.ಕಾನೂನು ಮಹಾವಿದ್ಯಾಲಯದಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿದ್ಯಾರ್ಥಿಗಳಿಗೆ ಅಣಕು ನ್ಯಾಯಾಲಯ ಸ್ಪರ್ಧೆ ಶೈಕ್ಷಣಿಕ ಚಟುವಟಿಕೆಗಿಂತ ಹೆಚ್ಚಿನದ್ದಾಗಿದೆ. ಇದು ಕಾನೂನು ಶಿಕ್ಷಣಕ್ಕೆ ಅಡಿಪಾಯವಾಗಿದೆ ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೋತಿ ಎಂ.ಹೇಳಿದರು. ಶುಕ್ರವಾರ ನಗರದ ಕೆಎಲ್ ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 16 ನೇ ಎಂ.ಕೆ.ನಂಬಿಯಾರ್ ಸ್ಮಾರಕ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಅಣಕು ನ್ಯಾಯಾಲಯ ಸ್ಪರ್ಧೆ ಕೇವಲ ಕಾನೂನು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಭವಿಷ್ಯದ ಜೀವನಕ್ಕೂ ಅತ್ಯಂತ ಮಹತ್ವದಾಗಿದೆ. ವಾದವು ಚಿಕ್ಕದಾಗಿರಬೇಕು, ಸಂಕ್ಷಿಪ್ತವಾಗಿರಬೇಕು. ಕೆಲವೇ ಪದಗಳಲ್ಲಿ ಹೇಳಬೇಕು ಮತ್ತು ಸಂಕೀರ್ಣ ಸಮಸ್ಯೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇರಬೇಕು ಎಂದು ಅವರು ಸಲಹೆ ನೀಡಿದರು. ನ್ಯಾಯಾಲಯದ ಶಿಷ್ಟಾಚಾರಗಳು, ಪೀಠದ ಮೇಲಿನ ಗೌರವವೂ ಅಷ್ಟೇ ಮುಖ್ಯ ಎಂದು ಅವರು ಹೇಳಿದರು. ನ್ಯಾಯವಾದಿ ಮತ್ತು ಕೆಎಲ್ಎಸ್ ಸೊಸೈಟಿ ಕಾರ್ಯದರ್ಶಿ ಎಸ್.ವಿ.ಗಣಾಚಾರಿ ಮಾತನಾಡಿ, ಅಣಕು ನ್ಯಾಯಾಲಯ ಸ್ಪರ್ಧೆ ಕಾನೂನು ಶಿಕ್ಷಣದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಏಕೆಂದರೆ ಪಠ್ಯ ಪುಸ್ತಕವು ನಮಗೆ ಸೈದ್ಧಾಂತಿಕ ವಿಷಯವನ್ನು ಮಾತ್ರ ಕಲಿಸುತ್ತದೆ. ಅದರೆ, ಅಣಕು ನ್ಯಾಯಾಲಯ ಸ್ಪರ್ಧೆ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣದ ಪ್ರಾಯೋಗಿಕ ಶಿಕ್ಷಣವನ್ನು ಅಭ್ಯಾಸ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಇದು ವಿದ್ಯಾರ್ಥಿಗಳು ಸಂಶೋಧನೆ, ವಕಾಲತ್ತು, ಸಾರ್ವಜನಿಕವಾಗಿ ಮಾತನಾಡುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್ಎಸ್ ಸೊಸೈಟಿ ಅಧ್ಯಕ್ಷ ಪ್ರದೀಪ್ ಎಸ್. ಸಾವ್ಕರ್ ಮಾತನಾಡಿ, ವಿದ್ಯಾರ್ಥಿಯ ವೃತ್ತಿಜೀವನದಲ್ಲಿ ವಾದ ಮಂಡನೆ ಬಹಳ ಮುಖ್ಯ. ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಭಾಗವಹಿಸುವುದು, ಜತೆಗೆ ಇಂಟರ್ನ್ಶಿಪ್ ಕಾನೂನು ವಿದ್ಯಾರ್ಥಿಗಳಿಗೆ ದೀರ್ಘಾವಧಿಯಲ್ಲಿ ಸಹಾಯ ಮಾಡುತ್ತದೆ. ಇದು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ. ವಿದ್ಯಾರ್ಥಿಗಳನ್ನು ಓದಲು, ಸಂಶೋಧನೆ ಮಾಡಲು ಮತ್ತು ಕೆಲಸ ಮಾಡಲು ಪ್ರೇರಣೆ ಉಂಟುಮಾಡುತ್ತದೆ. ವಿದ್ಯಾರ್ಥಿಗಳು ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಲು ಉಪಯುಕ್ತವಾಗುತ್ತದೆ ಎಂದು ಹೇಳಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ನ್ಯಾಯವಾದಿ ಆರ್.ಎಸ್. ಮುತಾಲಿಕ್ ಅವರು ಕಾಲೇಜಿನ ಪರಂಪರೆ ಮತ್ತು ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ವಿವರಿಸಿದರು.ಅಣಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕಿ ಹಾಗೂ ಪ್ರಾಧ್ಯಾಪಕಿ ಪ್ರೊ.ಅಶ್ವಿನಿ ಪರಬ್ ಅವರು ಸ್ಪರ್ಧೆಯ ನಿಯಮದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ವಿಜೇತರಿಗೆ ರೂ.50,000 ನಗದು ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ ಟ್ರೋಫಿ ಮತ್ತು ರೂ.30,000 ನಗದು ಬಹುಮಾನ, ಅತ್ಯುತ್ತಮ ಪುರುಷ ಸ್ಪರ್ಧಿಗೆ ರೂ. 15,000 ರೂಪಾಯಿ ನಗದು, ಅತ್ಯುತ್ತಮ ಮಹಿಳಾ ಸ್ಪರ್ಧಿಗೆ ರೂ.15,000 ರೂಪಾಯಿ ನಗದು, ಅತ್ಯುತ್ತಮ ಸ್ಮಾರಕ ಪ್ರಶಸ್ತಿ ಅಥವಾ ರೂ.15,000 ರೂಪಾಯಿ ನಗದು, ಮತ್ತು ಅತ್ಯುತ್ತಮ ಸಂಶೋಧಕರಿಗೆ ರೂ.10,000 ರೂಪಾಯಿ ನಗದು ಮತ್ತು ಅತ್ಯುತ್ತಮ ಸ್ಪರ್ಧಿಗೆ ಅಶೋಕ್ ಎನ್ ಪೋತದಾರ ಹೆಸರಿನ ಬೆಸ್ಟ್ ಮೂಟರ್ ಸ್ಪರ್ಧಿಗೆ ರೂ. 6,050 ನಗದು ಬಹುಮಾನ ನೀಡಲಾಗುತ್ತದೆ.…
Politics
11 hours ago
*ಸುಳ್ಳು ಬರೆಯುವ ಪತ್ರಕರ್ತರಿಗಿಂತ ಸತ್ಯ ಬರೆಯುವ ಮತ್ತು ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಹೆಚ್ಚಾಗಬೇಕು: ಸಿಎಂ ಕಿವಿಮಾತು*
ಪ್ರಗತಿವಾಹಿನಿ ಸುದ್ದಿ: ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…
Belagavi News
12 hours ago
*ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ತಾಲೂಕು…
Belagavi News
12 hours ago
*ಭಕ್ತರ ಗಮನಕ್ಕೆ: ಶ್ರೀಶೈಲಂನಲ್ಲಿ ಸ್ಪರ್ಷ ದರ್ಶನಕ್ಕೆ ಅವಕಾಶವಿಲ್ಲ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಶ್ರೀಕ್ಷೇತ್ರ ಶ್ರೀಶೈಲಂನಲ್ಲಿ ಮಾ.16 ರಿಂದ 20ರ ವರೆಗೆ 5 ದಿನಗಳ ಕಾಲ…
Belagavi News
12 hours ago
*ಬೆಳಗಾವಿಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಸವನ ಕುಡಚಿ ಗ್ರಾಮದಲ್ಲಿ ಶ್ರೀ ಬಸವೇಶ್ವರ…
Politics
12 hours ago
*ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು, ಕುದುರೆ ವ್ಯಾಪಾರಕ್ಕೆ ಹೆಸರುವಾಸಿ: ಡಿಸಿಎಂ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ: “ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು, ಕುದುರೆ ವ್ಯಾಪಾರಕ್ಕೆ ಹೆಸರುವಾಸಿ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಡಿಸಿಎಂ…
Karnataka News
14 hours ago
*ಕೆ.ಎಸ್.ಆರ್.ಟಿ.ಸಿ ಬಸ್-ಕಾರು ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು*
ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್.ಟಿ.ಸಿ ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಕ್ಷಿಣ…
Kannada News
15 hours ago
*ಮುಟ್ಟಿನ ರಜೆ ಜಾರಿಗೆ ಬಂದ್ರೆ ಕಂಪನಿಗಳು ಮಹಿಳೆಯರನ್ನು ನೇಮಿಸಲು ಹಿಂದೇಟು ಹಾಕುತ್ತಾರೆ: ಸುಪ್ರೀಂ ಕೋರ್ಟ್*
ಪ್ರಗತಿವಾಹಿನಿ ಸುದ್ದಿ: ಮುಟ್ಟಿನ ರಜೆಯನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಿದರೆ, ಖಾಸಗಿ ಕಂಪನಿಗಳು ಸೇರಿದಂತೆ ಹಲವು ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ…
Belagavi News
15 hours ago
*ಯುಗಾದಿ ಹಬ್ಬ: ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ*
ಪ್ರಗತಿವಾಹಿನಿ ಸುದ್ದಿ: ಮುಂಬರುವ ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕದ ವಿವಿಧ ನಿಲ್ದಾಣಗಳ ನಡುವೆ…



















