Kannada News
2 minutes ago
*ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಶುರು: 14 ಶಾಸಕರು ರೆಸಾರ್ಟ್ ಗೆ ಶಿಪ್ಟ್*
ಪ್ರಗತಿವಾಹಿನಿ ಸುದ್ದಿ: ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಹೆಚ್ಚಾಗಿರುವ ನಡುವೆ ಕಾಂಗ್ರೆಸ್ ತನ್ನ ಶಾಸಕರನ್ನು ಸುರಕ್ಷಿತವಾಗಿ…
Kannada News
8 minutes ago
*30 ವರ್ಷದಿಂದ ವ್ಯಕ್ತಿಯನ್ನು ಜೀತದ ಕೆಲಸ ಮಾಡಿಸಿದ ಮಹಿಳೆ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಸುಮಾರು 30 ವರ್ಷಗಳ ಕಾಲ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿರುವ ಆರೋಪದ…
Kannada News
10 minutes ago
*ಜೈಲಿನಿಂದ ಹೊರ ಬರುತ್ತಿದ್ದಂತೆ ಟೆಂಪಲ್ ರನ್ ನಡೆಸಿದ ಶಾಸಕ ಚಂದ್ರು ಲಮಾಣಿ*
ಪ್ರಗತಿವಾಹಿನಿ ಸುದ್ದಿ: ಲಂಚ ಸ್ವೀಕರಿಸಿದ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರಿಗೆ ಜಾಮೀನು…
Kannada News
13 hours ago
*ವೈಮಾನಿಕ ದಾಳಿಯಲ್ಲಿ ಒಂದು ಕಾಲು ಕಟ್: ಕೋಮಾಗೆ ಜಾರಿದ ಇರಾನ್‌ನ ನೂತನ ನಾಯಕ*
ಪ್ರಗತಿವಾಹಿನಿ ಸುದ್ದಿ: ಇರಾನ್‌ನ ನೂತನ ಸುಪ್ರೀಂ ನಾಯಕ ಮೊಜಬಾ ಖಮೇನಿ, ನೇಮಕಗೊಂಡ ಕೆಲವೇ ದಿನಗಳಲ್ಲಿ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು, ಕೋಮಾದಲ್ಲಿದ್ದಾರೆ…
Belagavi News
14 hours ago
*ನಿಯಮ ಉಲ್ಲಂಘಿಸಿದರೆ ದಂಡ, ಶಿಕ್ಷೆ: ತಂಬಾಕು ಮಾರಾಟಗಾರರಿಗೆ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಂಬಾಕು ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಮತ್ತು ಕೋಟ್ಟಾ-2003 ರ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರವನ್ನು…
Belagavi News
14 hours ago
*ಬೆಳಗಾವಿಯಲ್ಲಿ ನಿಷೇದಾಜ್ಞೆ ಜಾರಿ: ಡಿಸಿ ಆದೇಶ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರ ವತಿಯಿಂದ 2026 ರ…
Belagavi News
14 hours ago
*ಯಲ್ಲಮ್ಮ ದೇವಸ್ಥಾನದ ಹುಂಡಿ ಏಣಿಕೆ: 3.07 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿಯ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಸ್ಥಾನದ ಹುಂಡಿಗಳ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 3.07 ಕೋಟಿ ರೂ. ಮೌಲ್ಯದ…
Latest
15 hours ago
*ಯುಗಾದಿ ಹಬ್ಬಕ್ಕೆ ಬಮೂಲ್ ನಿಂದ ಹಾಲು ಉತ್ಪಾದಕರಿಗೆ ಭರ್ಜರಿ ಗಿಫ್ಟ್*
ಪ್ರಗತಿವಾಹಿನಿ ಸುದ್ದಿ: “2025-26ನೇ ಸಾಲಿನಲ್ಲಿ ಬಮೂಲ್ 3400 ಕೂಟಿ ರೂ. ವಹಿವಾಟು ಮಾಡಿದ್ದು, 14.50 ಕೋಟಿ ನಷ್ಟದಲ್ಲಿದ್ದ ಸಂಸ್ಥೆಯು ಈ…
Politics
16 hours ago
*BREAKING: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಿಗ್ ರಿಲೀಫ್*
ಪ್ರಗತಿವಾಹಿನಿ ಸುದ್ದಿ: ರೌಡಿಶೀಟರ್ ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಿಗ್ ರಿಲೀಫ್…
Belagavi News
16 hours ago
*ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜನೆ: ಶುಕ್ರವಾರದಿಂದ ಮೂರು ದಿನ ಸ್ಪರ್ಧೆ*
ಪ್ರಗತಿವಾಹಿನಿ ಸುದ್ದಿ: ಟಿಳಕವಾಡಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವತಿಯಿಂದ 16 ನೇ ಎಂ. ಕೆ. ನಂಬಿಯಾರ್ ಸ್ಮರಣಾರ್ಥ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ-2026 ಮಾ.13-15 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್, ನ್ಯಾಯವಾದಿ ಆರ್.ಎಸ್.ಮುತಾಲಿಕ್ ಹಾಗೂ ಕೆಎಲ್ ಎಸ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಎಸ್.ವಿ.ಗಣಾಚಾರಿ ಅವರು ಮಾಹಿತಿ ನೀಡಿದರು. ಭಾರತದ ಮಾಜಿ ಅಟಾರ್ನಿ ಜನರಲ್ ಹಾಗೂ ನಮ್ಮ ಸಂಸ್ಥೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿ ಪದ್ಮವಿಭೂಷಣ ಕೆ. ಕೆ. ವೇಣುಗೋಪಾಲ್ ಅವರ ಪ್ರಾಯೋಜಕತ್ವದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾರತದ 9 ವಿವಿಧ ರಾಜ್ಯಗಳಿಂದ ಒಟ್ಟು 30 ತಂಡಗಳು ಭಾಗವಹಿಸಲಿವೆ. ಉಚ್ಚ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯದ ಸುಮಾರು 50 ಹಿರಿಯ ವಕೀಲರು ಮತ್ತು ಶಿಕ್ಷಣ ತಜ್ಞರು ಮೂಟ್ ನ್ಯಾಯಾಧೀಶರಾಗಿ ಪಾಲ್ಗೊಂಡು ಸ್ಪರ್ಧಾಳುಗಳ ಮೌಲ್ಯಮಾಪನ ಮಾಡಲಿದ್ದಾರೆ. ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಒಟ್ಟು ರೂ. 1,35,000 ನಗದು ಬಹುಮಾನ ವಿತರಿಸಲಾಗುವುದು. ಇದಲ್ಲದೆ, ಬೆಳಗಾವಿಯ ಹಿರಿಯ ವಕೀಲ ಅಶೋಕ ಎನ್. ಪೋತದಾರ ಅವರ ಹೆಸರಿನಲ್ಲಿ ಶ್ರೇಷ್ಠ ವಾಗ್ಮಿ (Best Mooter) ಪ್ರಶಸ್ತಿಯೊಂದಿಗೆ ರೂ. 6,000 ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಯ ಉದ್ಘಾಟನಾ ಸಮಾರಂಭ ಮಾರ್ಚ್ 13 ರಂದು ಸಂಜೆ 5.30 ಕ್ಕೆ ಬೆಳಗಾವಿಯ ಟಿಳಕವಾಡಿ ಕೆಎಲ್‌ಎಸ್ ಪ್ಲಾಟಿನಂ ಜುಬಿಲಿ ಕಟ್ಟಡದ ಕೆ. ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ನಡೆಯಲಿದೆ. ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೋತಿ ಎಂ ಉಪಸ್ಥಿತರಿರುವರು. ಕೆಎಲ್ ಎಸ್ ಅಧ್ಯಕ್ಷ, ಅಡ್ವೊಕೇಟ್ ಪ್ರದೀಪ ಎಸ್. ಸಾವಕಾರ ಅಧ್ಯಕ್ಷತೆ ವಹಿಸುವರು. ಕೆಎಲ್ ಎಸ್ ಚೇರ್ಮನ್ ಎ.ಕೆ.ಟಗಾರೆ ಉಪಸ್ಥಿತರಿರುವರು. ಕರ್ನಾಟಕ ಲಾ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿರುವರು. ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಸಂಸ್ಥೆಯ 8 ಹಳೆಯ ವಿದ್ಯಾರ್ಥಿಗಳಾದ ಮೌನೇಶ ಬಡಿಗೇರ, ನವೀನ ಕೋಪಾರ್ಡೆ, ಹಳ್ಯಾಳಪ್ಪ, ಪ್ರಿಯಂಕಾ ರಾಜಗೊಳ್ಕರ್, ಜಗದೀಶ ಕಿತ್ತೂರು, ಶ್ರೇಯಾ ಉತ್ತೂರೆ, ವಿಜಯಕುಮಾರ ಬುದ್ರಿ ಮತ್ತು ನಾಗರಾಜ ತಳವಾರ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು. ಸಮಾರೋಪ ಸಮಾರಂಭ ಮಾರ್ಚ್ 15 ರಂದು ಸಂಜೆ 4:30 ಕ್ಕೆ ನಡೆಯಲಿದೆ.…













