ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪ್ರತಿ ವರ್ಷ ಜೂನ್ ೫ಕ್ಕೆ, ’ವಿಶ್ವ ಪರಿಸರ ದಿನಾಚರಣೆ’ಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು ಘೋಷಿಸಿರುವ ವಿಷಯದ ಕುರಿತಾಗಿ ಎಲ್ಲೆಡೆ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಬಾರಿಯ ಕೇಂದ್ರ ವಿಷಯ: ’ಜೀವಿವೈವಿಧ್ಯತೆಯನ್ನು ಆಚರಿಸೋಣ’ (Celebrating Biodiversity). ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ.

ಲೇಖನ ಬರೆಯಲು ವಿಷಯಗಳು:

೧. ಜೀವಿವೈವಿಧ್ಯತೆಯ ರಕ್ಷಣೆಯಿಂದ ಮಾನವನ ಪ್ರಗತಿ

೨. ಕೊರೋನಾ ವೈರಸ್ ಪಿಡುಗು- ನಿಸರ್ಗ ಹಾಗೂ ಜೀವಿವೈವಿಧ್ಯತೆಗೆ ವರದಾನ

೩. ಪರಿಸರ ಸಮತೋಲನೆಯಲ್ಲಿ ಜೀವಿವೈವಿಧ್ಯತೆಯ ಪಾತ್ರ.

ನಿಬಂಧನೆಗಳು
೧. ಚಿತ್ರ ಬರೆಯಲು A3 ( Standard Size) ಹಾಳೆ ಬಳಸುವುದು.

೨. ಕ್ರೆಯಾನ್ಸ್, ಬಣ್ಣದ ಪೆನ್ಸಿಲ್, ಬ್ರಷ್ ಈ ಯಾವುದಾದರೂ ಸಾಮಗ್ರಿಗಳನ್ನು ಬಳಸಿ ಚಿತ್ರವನ್ನು ರಚಿಸಬಹುದು.

೩. ಲೇಖಕರು ತಮ್ಮ ಹೆಸರು, ವಿಳಾಸ, ಮೊಬೈಲ್/ದೂರವಾಣಿ ಇ-ಮೇಲ್ ಹಾಗೂ ಉದ್ಯೋಗದ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು.

೪. ಪ್ರತಿ ವಿಷಯದ ಅತ್ಯುತ್ತಮ ಐದು ಚಿತ್ರಗಳಿಗೆ (೬-೮, ೯-೧೨ನೇ ವರ್ಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕ) ನಗದು ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

೫. ಒಬ್ಬರು ಒಂದು ವಿಷಯಕ್ಕೆ ಒಂದು ಚಿತ್ರವನ್ನು ಮಾತ್ರ ಬರೆಯತಕ್ಕದ್ದು.

೬. ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುವುದು.

೭. ಲೇಖನಗಳನ್ನು ಕರಾವಿಪ ಕಛೇರಿಗೆ ಕಳುಹಿಸಲು ಕೊನೆಯ ದಿನಾಂಕ: ೩೧, ಮೇ ೨೦೨೦.

೮. ಲೇಖನಗಳನ್ನು ಕಳಿಸಬೇಕಾದ ಇಮೇಲ್:   : [email protected] ಅಥವಾ ವಾಟ್ಸ್‌ಅಪ್ ಸಂಖ್ಯೆ: ೯೪೮೩೫೪೯೧೫೯. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ೯೦೦೮೪೪೨೫೫೭/ ೯೪೮೩೫೪೯೧೫೯ / ೯೮೮೦೯೧೭೮೩೧

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button