Latest
ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ; ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಉಡಾವಣೆಯ ಬಗ್ಗೆ ದ್ವಿಪಕ್ಷೀಯ ತನಿಖೆಗೆ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಇಸ್ಲಾಮಾಬಾದ್: ಕಳೆದ ಮೂರು ದಿನಗಳ ಹಿಂದೆ ಅಮೆರಿಕದ ಗುಪ್ತಚರ ಇಲಾಖೆ ಭಾರತ ಮತ್ತು ಪಾಕಿಸ್ತಾನದ ವಿಷಯ ಕುರಿತಾಗಿ ಮಾಹಿತಿಯನ್ನು ವೈಟ್ ಹೌಸ್ ಗೆ ತಿಳಿಸಿತ್ತು. ಭಾರತ-ಪಾಕಿಸ್ತಾನದ ಯುದ್ಧದ ಸಂಭವನೀಯತೆಯು ದಟ್ಟವಾಗಿದೆ ಎಂಬ ವರದಿಯ ಬೆನ್ನಲ್ಲೇ, ಪಾಕಿಸ್ತಾನದ ವಿದೇಶಾಂಗ ಇಲಾಖೆಯಿಂದ ಒತ್ತಡ ಕೇಳಿ ಬಂದಿದೆ.
ಮೊದಲೇ ಆರ್ಥಿಕ ಸಂಕಷ್ಟದ ನಡುವೆ ವಿಶ್ವ ಹಣಕಾಸು ನಿಧಿಯಿಂದ ಬಿಡಿಗಾಸು ಧನ ಸಹಾಯ ದೊರೆಯದೇ ವಿಲವಿಲ ಒದ್ದಾಡುತ್ತಿದ್ದ ಪಾಕಿಸ್ತಾನಕ್ಕೆ ಚೀನಾ ಸಹಾಯ ಮಾಡಲು ಮುಂದಾಗುತ್ತಿದ್ದಂತೆಯೇ ಅದೀಗ ಪೊರೆ ಬಿಟ್ಟ ಹಾವಿನಂತೆ ಚುರುಕಾಗಿಯೇ ಭಾರತದತ್ತ ಮುಖ ಮಾಡುತ್ತಿದೆ. ಅಲ್ಲದೇ ಹಿಂದೂ ಪ್ರಭಾವಿತದ ಬಲೂಚಿಸ್ತಾನದ ವಿಷಯದಲ್ಲಿ ಭಾರತವು ಕೈಯಾಡಿಸುತ್ತಿದೆ ಎಂಬ ಒಳಬೇಗುದಿಯೂ ಇದೆ. ಹಾಗೆ ನೋಡಿದರೆ ಭಾರತ, ಪ್ರತ್ಯೇಕ ಬಲೂಚಿಸ್ತಾನದ ಪರವಾಗಿ ಎಂದೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಇದೊಂದು ಕೇವಲ ಊಹಾ ಪೋಹ ಅಷ್ಟೇ. ಹಾಗೆಯೇ ಸಿಂಧೂ ನದಿ ನೀರಿನ ವಿಷಯವೂ ಅದನ್ನು ಕೆರಳಿಸಿದಂತಿದೆ.