ಪ್ರಿಯಾಂಕಾ ಚೋಪ್ರಾ ಬಗ್ಗೆ ಕ್ಯಾತೆ ತೆಗೆದ ಪಾಕಿಸ್ತಾನ
ಪ್ರಗತಿವಾಹಿನಿ ಸುದ್ದಿ : ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಬಗ್ಗೆ ಪಾಕಿಸ್ತಾನ ಕ್ಯಾತೆ ತೆಗೆದಿದೆ. ಪ್ರಸ್ತುತ ವಿಶ್ವಸಂಸ್ಥೆಯ ಗುಡ್‌ವಿಲ್ ಬ್ರಾಂಡ್ ಅಂಬಾಸಿಡರ್ ಆಗಿರುವ ಪ್ರಿಯಾಂಕಾ ಚೋಪ್ರಾ ಅವರ ಮೇಲೆ ಪಾಕಿಸ್ತಾನ ಗರಂ ಆಗಿದೆ.
ಪ್ರಿಯಾಂಕಾ ಚೋಪ್ರಾಳನ್ನು ವಜಾ ಮಾಡಬೇಕೆಂದು ಪಾಕಿಸ್ತಾನ ಕೋರಿದೆ. ಈ ಬಗ್ಗೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರಿನ್ ಮಜಾರಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ. ಅವರು ಪತ್ರದಲ್ಲಿ ಉಲ್ಲೇಖಿಸಿರುವಂತೆ, “ಪ್ರಿಯಾಂಕಾ ಚೋಪ್ರಾ ಅವರು, ಪಾಕಿಸ್ತಾನ ವಿರುದ್ಧ ಪರಮಾಣು ದಾಳಿ ಮಾಡುತ್ತೇವೆ ಎಂದ ಭಾರತವನ್ನು ಸಾರ್ವಜನಿಕವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ್ದಾರೆ”. ಅವರನ್ನು ಈ ಕೂಡಲೇ ಬ್ರಾಂಡ್ ಅಂಬಾಸಿಡರ್ ನಿಂದ ಹೊರಗುಳಿಸಬೇಕು ಎಂದು ಮನವಿಮಾಡಿದ್ದಾರೆ.
37 ವರ್ಷದ ನಟಿ ಮತ್ತು ಮಾಜಿ ಮಿಸ್ ವರ್ಲ್ಡ್ ಪ್ರಿಯಾಂಕ ಚೋಪ್ರಾ, ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಿಂದೂ ರಾಷ್ಟ್ರೀಯತಾವಾದಿ ಸರ್ಕಾರದ ಸ್ಥಾನವನ್ನು ಬಹಿರಂಗವಾಗಿ ಅನುಮೋದಿಸಿದ್ದಾರೆ ಎಂದು ಯುನಿಸೆಫ್ ಮುಖ್ಯಸ್ಥ ಹೆನ್ರಿಯೆಟಾ ಫೋರ್ ಅವರಿಗೆ ಬರೆದ ಪತ್ರದಲ್ಲಿ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ ಆರೋಪಿಸಿದ್ದಾರೆ.
Sent letter to UNICEF chief regarding UN Goodwill Ambassador for Peace Ms Chopra pic.twitter.com/PQ3vwYjTVz
— Shireen Mazari (@ShireenMazari1) August 21, 2019
ಶಾಂತಿ ಸಾರ ಬೇಕಿದ್ದ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಹದ್ದನ್ನು ಮೀರಿ ಅನರ್ಹರಾಗಿದ್ದಾರೆ ಮತ್ತು ಗುಡ್ವಿಲ್ ಬ್ರಾಂಡ್ ಅಂಬಾಸಿಡರ್ ನಿಂದ ಅನರ್ಹರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ, ಮನವಿ ಪಡೆದಿರುವ ವಿಶ್ವಸಂಸ್ಥೆಯು ಈ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಕಾದು ನೋಡಬೇಕಿದೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ