ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಒಂದು ಲೀ ಹಾಲಿನ ಬೆಲೆ 250 ರೂ., ಒಂದು ಕೆ ಜಿ ಕೋಳಿ ಮಾಂಸದ ಬೆಲೆ 780 ರೂ ನತ್ತ ಏರುತ್ತಲೇ ಇದ್ದು ಜನ ಜೀವನ ಕಂಗಲಾಗಿರುವುದು ಬಯಲಾಗಿದೆ. ಹಣದುಬ್ಬರವಂತೂ ಜಗತ್ತೇ ಕಂಡು ಕೇಳರಿಯದಂತಾಗಿದೆ. ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಚಹಾ ಪುಡಿ ದರ ಒಂದು ಕೆ ಜಿ 1500 ರೂಗಳಷ್ಟಾಗಿದೆ. ಮೂಲಭೂತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತಿದ್ದು, ಜನ ಜೀವನ ಅಯೋಮಯವಾಗಿದೆ.
ಪಾಕಿಸ್ತಾನದ ರಕ್ಷಣಾ ಸಚಿವರು ತಮ್ಮ ದೇಶದ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡುತ್ತಾ ಪಾಕಿಸ್ತಾನ ಈಗ ಒಂದು ರೀತಿಯಲ್ಲಿ ‘ದಿವಾಳಿ’ಯಾಗಿದೆ ಎಂದಿರುವುದು ಸಾಕ್ಷೀಭೂತವಾಗಿದೆ.
ಅಲ್ಲಿ ಇತ್ತೀಚೆಗೆ ಬಾಂಬ್ ಸ್ಪೋಟಗಳು ಸಂಭವಿಸುತ್ತಿದ್ದು, ಸರ್ಕಾರದ ಆಡಳಿತವೂ ಭದ್ರವಾಗಿಲ್ಲವೆಂಬುದನ್ನು ಎತ್ತಿ ತೋರಿಸಿದೆ. ಸ್ವಾತಂತ್ರ್ಯ ಪಡೆದಾಗಿನಿಂದ, ರಾಷ್ಟ್ರಾಭಿವೃದ್ದಿ ಕಡೆಗೆ ಗಮನ ಕೊಡದೇ, ಬಲಿಷ್ಠ ಮತ್ತು ತಾಯ್ನಾಡಾದ ಭಾರತದ, ಕಾಶ್ಮೀರ ವಿಚಾರದಲ್ಲಿ ಕಿರಿಕ್ ಮಾಡಿಕೊಂಡು, ಯುದ್ದೋನ್ಮಾದದಲ್ಲಿ ಮೈ ಮರೆತಿದ್ದರ ಪರಿಣಾಮವಾಗಿ, ಇಂತಹ ದುಸ್ಥಿತಿಗೆ ತಲುಪಿದೆ. ಅದರಲ್ಲೂ ಕರೋನಾದ ಸಂಕಷ್ಟದಲ್ಲಿ ಸರಿಯಾದ ಆರ್ಥಿಕ ಮತ್ತು ಔಷಧಿಯ ನೆರವು ಸಿಗದೇ ಹಣ್ಣುಗಾಯಿ ನೀರುಗಾಯಿ ಆದದ್ದನ್ನು ಸ್ಮರಿಸಿಕೊಳ್ಳಬಹುದು.
*ರೋಹಿಣಿ ಸಿಂಧೂರಿ ಖಾಸಗಿ ಫೋಟೋ ವೈರಲ್ ಮಾಡಿದ ಡಿ.ರೂಪಾ*
https://pragati.taskdun.com/rohini-sindhuri-d-roopaphoto-viral/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ