ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತುಂಬಿದ್ದ ಪಾಕಿಸ್ತಾನದ ಡ್ರೋನ್‍ನ್ನು ಬಿಎಸ್‍ಎಫ್ ಯೋಧರು ಹೊಡೆದುರುಳಿಸಿದ್ದಾರೆ.
ಕಥುವಾದ ಹಿರಾನಗರ ಸೆಕ್ಟರ್ ಬಳಿ ಉಗ್ರರಿಗೆ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಡ್ರೋನ್ ಪತ್ತೆಯಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಬಿಎಸ್ ಎಫ್ ಯೋಧರು ಡ್ರೋನ್ ಹೊಡೆದುರಳಿಸಿದ್ದಾರೆ. ಡ್ರೋನ್‍ನಲ್ಲಿದ್ದ ಅಮೆರಿಕ ನಿರ್ಮಿತ ಎಂ4 ಬಂದೂಕು, ಮದ್ದುಗುಂಡುಗಳು ಹಾಗೂ 7 ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆಯುಧಗಳನ್ನು ಉಗ್ರ ಅಲಿ ಭಾಯ್‍ಗೆ ಕಳುಹಿಸಲಾಗಿತ್ತು. ವಸ್ತುಗಳ ಮೇಲೆ ಆತನ ಹೆಸರನ್ನು ಬರೆಯಲಾಗಿದೆ. ಡ್ರೋನ್ ಸುಮಾರು 8 ಅಡಿ ಅಗಲವಿದ್ದು, ಹಿರಾನಗರದ ಅಂತರಾಷ್ಟ್ರೀಯ ಗಡಿಯಿಂದ 250 ಮೀಟರ್ ಒಳಗೆ ಕಾಣಿಸಿಕೊಂಡಿತ್ತು. 8-9 ಸುತ್ತು ಗುಂಡು ಹೊಡೆದು ಹೊಡೆದುರುಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಬಿಎಸ್‍ಎಫ್ ಅಧಿಕಾರಿಗಳು ಮಾಹಿತಿ ನೀಡಿ, ಕಥುವಾ ಅಂತರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದ್ದೇವೆ. ಡ್ರೋನ್‍ನಲ್ಲಿ ಅಮೆರಿಕ ನಿರ್ಮಿತ ಎಂ4 ಕ್ಯಾರ್ಬಿನ್ ಮಷಿನ್, ಎರಡು ಮ್ಯಾಗಜೈನ್‍ಗಳು, 60 ಆರ್‍ಡಿಎಸ್(ರ್ಯಾಪಿಡ್ ಡಿಪ್ಲಾಯ್‍ಮೆಂಟ್ ಸಿಸ್ಟಮ್) ಹಾಗೂ 7 ಚೀನಾ ನಿರ್ಮಿತ ಗ್ರೆನೇಡ್‍ಗಳು ಪತ್ತೆಯಾಗಿವೆ. ಡ್ರೋನ್ ಮೂಲಕ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪಾಕಿಸ್ತಾನದಿಂದ ಭಾರತದ ಕಡೆಗೆ ಸಾಗಿಸುವ ಕುರಿತು ಬಿಎಸ್‍ಎಫ್ ಇಂಟಲಿಜೆನ್ಸ್ ಶಾಖೆ ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ