Kannada NewsKarnataka News

ಅಧಿವೇಶನದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : *ಪಂಚಮಸಾಲಿ -ಗೌಡ -ಮಲೆಗೌಡ- ದೀಕ್ಷೆ ಲಿಂಗಾಯತರಿಗೆ ರಾಜ್ಯದಲ್ಲಿ 2A  ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರದಲ್ಲಿ OBC ಮೀಸಲಾತಿಗೆ ಕೂಡಲೇ ರಾಜ್ಯ ಸರ್ಕಾರವು ಶಿಫಾರಸ್ಸು ಮಾಡುವಂತೆ ಹಕ್ಕೊತ್ತಾಯಿಸಿ ಆರಂಭವಾಗಿರುವ ಚಳವಳಿ 6ನೇ ಹಂತಕ್ಕೆ ಪ್ರವೇಶಿಸಿದೆ.

*ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ *ಪಂಚಮಸಾಲಿ ಜನಪ್ರತಿನಿಧಿಗಳ -ಪದಾಧಿಕಾರಿಗಳ ರಾಜ್ಯ ಕಾರ್ಯಕಾರಿಣಿ ಸಭೆ ಪಂಚಮಸಾಲಿ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ಸಭೆ ನಡೆಯಿತು.

ನಿರ್ಣಯಗಳು

1. *ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಕೊಟ್ಟ ಮಾತು ತಪ್ಪಿರುವುದರಿಂದ ಪಕ್ಷಾತೀತವಾಗಿ ನಮ್ಮ ಸಮಾಜದ ಶಾಸಕರುಗಳು ನಾಳೆ ಅಧಿವೇಶನದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕು*.

2. *ಕಳೆದ ಏಳು ತಿಂಗಳಿಂದ ನಿರಂತರವಾಗಿ ಚಳುವಳಿ ಮಾಡುತ್ತಿದ್ದರೂ ಇದುವರೆಗೆ ಸರ್ಕಾರದ ಯಾವುದೇ ಸ್ಪಷ್ಟನೆ ಬಾರದಿರುವುದರಿಂದ*, *ಶಾಸಕರುಗಳ ನಿಯೋಗ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಬೇಕು*.

3. *ಲೋಕಸಭೆ ಚುನಾವಣೆ ಒಳಗಾಗಿ 2A ಹಾಗೂ OBC ಮೀಸಲಾತಿ ಅನುಷ್ಠಾನ ಮಾಡುವಂತೆ ಮೂರನೇ ಬಾರಿಗೆ ಮುಖ್ಯಮಂತ್ರಿಯವರಿಗೆ ಒತ್ತಾಯಿಸಲು ಶಾಸಕರುಗಳ ನಿಯೋಗ ಕೊಂಡೊಯ್ಯಬೇಕು*.

4. *ಮಾರ್ಚ್ 10ರಂದು   ಕಲಬುರ್ಗಿಯಲ್ಲಿ ನಡೆಯಲಿರುವ ಪಂಚಮಸಾಲಿ ದೀಕ್ಷ ಲಿಂಗಾಯತ ಸಮಾವೇಶದಲ್ಲಿ ಮುಂದಿನ ಹೋರಾಟದ ನಿರ್ಧಾರಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ*.

*ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು* 

ಬಸವನಗೌಡ ಪಾಟೀಲ್ ಯತ್ನಾಳ್ ಶಾಸಕರು,ವಿಜಯಪುರ

ವಿಜಯಾನಂದ ಕಾಶಪ್ಪನವರ್, ಹುನಗುಂದ

ರಾಜು ಕಾಗೆ ಶಾಸಕ ಕಾಗವಾಡ

ಸಿದ್ದು ಸವದಿ ಶಾಸಕ ತೇರ್ದಾಳ್

ರಾಜುಗೌಡ ಪಾಟೀಲ್ ಶಾಸಕ ದೇವರಹಿಪ್ಪರಗಿ

ಬಾಬಾಸಾಹೇಬ ಪಾಟೀಲ ಶಾಸಕ ಕಿತ್ತೂರು

ಎಬಿ ಪಾಟೀಲ್ ಮಾಜಿ ಸಚಿವ ಬೆಳಗಾವಿ

ಎಚ್ಎಸ್ ಶಿವಶಂಕರ್ ಮಾಜಿ ಎಂಎಲ್ಸಿ ಹರಿಹರ

ಎಂಪಿ ನಾಡಗೌಡ ಮಾಜಿ ಎಂಎಲ್ಸಿ

ಶಿವರಾಮೇಗೌಡ ಮಾಜಿ ಸಂಸದ

*ಅಜಯಕುಮಾರ್, ಮೇಯರ್ ದಾವಣಗೆರೆ* 

ಮತ್ತು ರಾಷ್ಟ್ರೀಯ, ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button