Kannada NewsLatest

*ಮಾತಿಗೆ ತಪ್ಪುವ ರೀತಿ ನಡೆದುಕೊಳ್ಳುತ್ತಿದ್ದಾರೆ; ಮೀಸಲಾತಿ ಘೋಷಿಸದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯ ಬಸವ ಜಯಮೃತ್ಯುಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಸುತ್ತಿರುವ ಪಾದಯಾತ್ರೆ ಬೈಲಹೊಂಗಲ ತಲುಪಿದ್ದು, ನಾಳೆಯೊಳಗಾಗಿ ಮೀಸಲಾತಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಬೈಲಹೊಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಸವದತ್ತಿಯಿಂದ ಆರಂಭವಾಗಿರುವ ಪಾದಯಾತ್ರೆ ಬೈಲಹೊಂಗಲ ತಲುಪಿದ್ದೇವೆ. ನಾಳೆ ಸುವರ್ಣವಿಧಾನಸೌಧ ತಲುಪುತ್ತೇವೆ. ಅಷ್ಟರೊಳಗಾಗಿ ಮೀಸಲಾತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

Home add -Advt

ರಾಜ್ಯ ಸರ್ಕಾರ ನಮ್ಮ ಭಾವನೆಗೆ ಸ್ಪಂದಿಸಬೇಕಿತ್ತು. ನಾನು ಯಾವ ಮುಖ್ಯಮಂತ್ರಿಗಳಿಗೂ ಇಷ್ಟೊಂದು ಕೇಳಿರಲಿಲ್ಲ. ಆದರೆ ಮುಖ್ಯಮಂತ್ರಿಗಳು ಮಾತಿಗೆ ತಪ್ಪುತ್ತಿದ್ದಂತೆ ಕಾಣುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೇಲೆ ನಾವು ಸಾಕಷ್ಟು ನಂಬಿಕೆ ಇಟ್ಟಿದ್ದೇವೆ. ನಾಳೆ ಸುವರ್ಣ ವಿಧಾನಸೌಧ ತಲುಪುವ ಮೊದಲು ಸಮಾವೇಶ ನಡೆಸುತ್ತೆವೆ. ಎಲ್ಲಾ ಜಿಲ್ಲೆಗಳಿಂದಲೂ ಸಮುದಾಯದವರು ಬರುತ್ತಾರೆ. ನಾಳೆ ಮೀಸಲಾತಿ ಘೋಷಿಸಿದರೆ ವಿಜಯೋತ್ಸವ, ಇಲ್ಲವಾದಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

*ಕಾರಿನೊಳಗೇ ಆತ್ಮಹತ್ಯೆಗೆ ಶರಣಾದ ಟೆಕ್ಕಿ*

https://pragati.taskdun.com/techeesuiidein-carbangalore/

Related Articles

Back to top button