Belagavi NewsBelgaum NewsKannada NewsKarnataka News

*ಮತ್ತೆ ಪಂಚಮಸಾಲಿ ಹೋರಾಟದ ಎಚ್ಚರಿಕೆ ನೀಡಿದ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳಿಂದ ತಣ್ಣಗಾಗಿದ್ದ ಮೀಸಲಾತಿ ಹೋರಾಟ ಇದೀಗ ಮತ್ತೆ ಶುರುವಾಗುವ ಲಕ್ಷಣಗಳು ಕಾಣುತ್ತಿವೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಮತ್ತೆ ಹೋರಾಟ ಮಾಡುತ್ತೇವೆ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಬಸವ ಜಯಮೃತುಂಜಯ ಸ್ವಾಮೀಜಿ, ಸೋಮವಾರ ಉಳವಿಯಲ್ಲಿ ಹೋರಾಟದ ಬಗ್ಗೆ ರಾಜ್ಯಮಟ್ಟದ ಸಂಕಲ್ಪ ಮಾಡುತ್ತೇವೆ. ಜೂನ್ 24ರಂದು ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಎರಡನೇ ಬಾರಿ ಹೋರಾಟದ ಸಂಕಲ್ಪ ಮಾಡುತ್ತೇವೆ ಎಂದರು.

Related Articles

ಹೋರಾಟ ಎಲ್ಲಿಂದ ಆರಂಭವಾಗಲಿದೆ ಎಂಬುದನ್ನು ಅಂದೇ ತೀರ್ಮಾನಿಸುತ್ತೇವೆ. ಮೀಸಲಾತಿ ಆದೇಶ ಪತ್ರ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Home add -Advt

Related Articles

Back to top button