Belagavi NewsBelgaum NewsLatest

*ಹೋರಾಟ ಹತ್ತಿಕ್ಕಲು ಮುಂದಾದರೆ ಮುಂದಿನ ಪ್ರತಿಭಟಣೆ ಎದುರಿಸಬೆಕಾಗುತ್ತದೆ: ಸರ್ಕಾರಕ್ಕೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ*

ಹೊಸೂರು ಗ್ರಾಮದಿಂದ ಪಂಚಮಸಾಲಿ ಹೋರಾಟಕ್ಕೆ ಹೊಸ ಮುನ್ನುಡಿ

ಪ್ರಗತಿವಾಹಿನಿ ಸುದ್ದಿ: ಪಂಚಮಸಾಲಿ ಸಮುದಾಯದ ಜನತೆ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಕಾಣದೆ ಜೀವಸಂಕುಲದ ಹೊಟ್ಟೆ ತುಂಬಿಸಲು ಸದಾ ಕೃಷಿಕಾಯಕದಲ್ಲಿ ತೊಡಗಿಕೊಂಡು ಈ ಸಮಾಜಕ್ಕೆ 2A ಮೀಸಲಾತಿ ನೀಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಂಚಮಸಾಲಿ ಸಮಾಜದ ಋಣತಿರಸಬೇಕು. ಅದನ್ನು ಬಿಟ್ಟು ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾದರೆ ಮುಂದಿನ ಪ್ರತಿಭಟಣೆ ಎದುರಿಸಬೆಕಾದಿತು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.


ಸಮೀಪದ ಹೊಸೂರ ಗ್ರಾಮದಲ್ಲಿ ನಡೆದ ಪಂಚಮಸಾಲಿ ಹೊರಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಿದಲ್ಲಿ ಸಮಾಜದ ಜನತೆಗೆ ಹೆಚ್ಚಿನ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಪಂಚಮಸಾಲಿ ಸಮುದಾಯವು ಶ್ರೀಮಂತ ಮತ್ತು ಬಡ ಭಾಗಗಳಿಗೆ ವಿಭಜಿತವಾಗಿದ್ದು, ಹೆಚ್ಚಿನ ಬಡ ಭಾಗದ ಜನರಿಗೆ ಸರಿಯಾಗಿ ಸಂಪತ್ತು ಮತ್ತು ಸಂಪನ್ಮೂಲಗಳು ಲಭ್ಯವಿಲ್ಲ. ಮೀಸಲಾತಿ ಪಡೆಯಲು ನ್ಯಾಯುತವಾದ ಮುಖ್ಯ ಕಾರಣವಾಗಿದೆ. ಈ ಹೋರಾಟವನ್ನು ಹಲವಾರು ಧಾರ್ಮಿಕ ನಾಯಕರು, ರಾಜಕೀಯ ಮುಖಂಡರು, ಹಾಗೂ ಸಮಾಜದ ಪ್ರಮುಖರು ಮುನ್ನಡೆಸುತ್ತಿದ್ದಾರೆ. ಆದರೆ ಸರ್ಕಾರ ಹತ್ತಿಕ್ಕುವ ಕಾರ್ಯ ನಡೆದಿರುವದು ಸರಿಯಲ್ಲ. ಆದ್ದರಿಂದ‌ ಹೊಸ ಮುನ್ನುಡಿಗೆ ಹೆಸರಾದ ಹೊಸೂರ ಗ್ರಾಮದಿಂದ ಹೋರಾಟದ ಕಿಚ್ಚು ಹೆಚ್ಚಲಿದೆ ಎಂದರು.


ಸಮಾಜದ ಮುಖಂಡರಾದ ಸೋಮಲಿಂಗ ಮೆಳ್ಳಿಕೇರಿ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಮತ್ತಿಕೊಪ್ಪ, ಜಗದೀಶ್ ಬೂದಿಹಾಳ, ವಿಜಯ ಬೊಳಣ್ಣವರ ಮಾತನಾಡಿ, ಸಮಾಜದ ಮಿಸಲಾತಿಗಾಗಿಧರಣಿಗಳು, ಸತ್ಯಾಗ್ರಹಗಳು. ಪಾದಯಾತ್ರೆ, ಸಾರ್ವಜನಿಕ ಸಭೆಗಳು ಮತ್ತು ಚರ್ಚೆಗಳು ನಡೆದಿದ್ದು ರಾಜಕೀಯವಾಗಿ ಈ ಹೊರಾಟವನ್ನು ದುರಪಯೋಗ ಪಡೆದುಕೊಳ್ಳುತ್ತಿರುವದು ಹೋರಾಟಕ್ಕೆ ಹಿನ್ನಡೆಯಾಗಿದ್ದು ಹೋರಾಟದ ನೆತೃತ್ವ ವಕೀಲರು ವಹಿಸಿದ್ದು ತಾರ್ಕಿಕ ಅಂತ್ಯಕಾಣಲಿದೆ ಎಂದರು.


ಎಫ್.ಎಸ್.ಸಿದ್ದನಗೌಡರ ಪ್ರಸ್ತಾವಿಕವಾಗಿ ಮಾತನಾಡಿ, ಸರ್ಕಾರ ಈ ಹೋರಾಟಕ್ಕೆ ಗಂಭೀರವಾಗಿ ಗಮನ ಹರಿಸುತ್ತಿಲ್ಲ, 2A ಮೀಸಲಾತಿ ನೀಡುವ ಕುರಿತಾಗಿ ಕುಲಶಾಸ್ತ್ರ ಅಧ್ಯಯನ ಸಮಿತಿಗಳು ಪುರ್ಣ ಪ್ರಮಾಣದ ವರದಿಯನ್ನು ಸರ್ಕಾರ ಪಡೆದುಕೊಳ್ಳದೆ ಮೀನ ಮೇಷ ಡನಿಸುತ್ತಿದೆ. ಇದರಿಂದ ಮಿಸಲಾತಿ ಹೋರಾಟ ಇನ್ನೂ ಸ್ಪಷ್ಟ ಪರಿಹಾರ ಪಡೆದುಕೊಂಡಿಲ್ಲ ಆದ್ದರಿಂದ ವಿಧಾನಸೌಧ ಮುತ್ತಿಗೆ ಅನಿವಾರ್ಯ ಎಂದರು.


ವೇದಿಕೆಯ ಮೇಲೆ ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ, ತಾಲ್ಲೂಕಾ ಪಂಚಮಸಾಲಿ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೀರಣಗೌಡ ಸಂಗಣ್ಣವರ, ತಾಲೂಕಾ ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ಚನ್ನಮ್ಮ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಗೇಶ ಗುಂಡ್ಲೂರ, ನೀರು ಬಳಕೆದಾರರ ಸಂಘದ ನಿರ್ದೇಶಕ ಚನ್ನಪ್ಪ ಬೂದಿಹಾಳ, ಶ್ರೀಕಾಂತ್ ಮಳಕನ್ನವರ ಇದ್ದರು.


ಕಾರ್ಯಕ್ರಮದಲ್ಲಿ ಆಯ್.ಎಸ್.ಬೆಂಡಿಗೇರಿ, ಮಲ್ಲಿಕಾರ್ಜುನ ಬೋಳೆತ್ತಿನ, ರವಿ ಮಾಕಿ, ನಾಗರಾಜ ಬುಡಶೆಟ್ಟಿ, ಮಲ್ಲಿಕಾರ್ಜುನ ಕರಡಿಗುದ್ದಿ, ಸೋಮಲಿಂಗಪ್ಪ ಕೋಟಗಿ, ಶಿವಪುತ್ರಪ್ಪ ಯರಡಾಲ, ಅಶೋಕ ಬಡಿಗೇರ, ಶಿವಕುಮಾರ ಸೋಗಲ, ಬಸಪ್ಪ ಶಿದ್ನಾಳ, ಮಲ್ಲಿಕಾರ್ಜುನ ವಕ್ಕುಂದ, ಅಶೋಕ ಇಂಗಳಗಿ, ಸಂತೋಷ ಸಿದ್ದನಗೌಡರ, ಗೌಡಪ್ಪ ಹೊಸಮನಿ, ವಿನಾಯಕ ಪೆಂಟೆದ, ಬಾಳೆಶ ಹುರಕಡ್ಲಿ, ಮಹಾಂತೇಶ ಅಂಗಡಿ, ಶಿವಾನಂದ ಶಿದ್ನಾಳ, ವೀರಬಸು ಮುನವಳ್ಳಿ, ಸೇರಿದಂತೆ ನೂರಾರು ಜನ ಇದ್ದರು.
ವೀರೆಶ ಹಲಕಿ ಸ್ವಾಗತಿಸಿ ನಿರೂಪಣೆ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button