ಪ್ರಗತಿವಾಹಿನಿ ಸುದ್ದಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಮುಖಂಡರು ನಿನ್ನೆ ಬೆಳಗಾವಿಯಲ್ಲಿ ನಡೆಸಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಕಲ್ಲುತೂರಾಟ ಘಟನೆ ನಡೆದಿತ್ತು. ಇದೀಗ ಈ ಪ್ರಕರಣ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಪಂಚಮಸಾಲಿ ಸಮುದಾಯದ ಪ್ರತಿಭಟನೆ, ಕಲ್ಲುತೂರಾಟ ಘಟನೆಯಲ್ಲಿ 7 ಸರ್ಕಾರಿ ಬಸ್, ಒಂದು ವಿಧಾನ ಪರಿಷತ್ ಸದಸ್ಯರ ಕಾರು, 3 ಪೊಲೀಸ್ ವಾಹನ ಜಖಂ ಗೊಂಡಿತ್ತು. ಕಲ್ಲು ತೂರಾಟ ನಡೆಸಿದ ಐವರ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ
ನಿಂಗಪ್ಪ, ರಾಮಗೌಡ, ಫಕೀರಗೌಡ, ಮಂಜುನಾಥ್ ಬೆಂಡಿಗೇರಿ, ಉಮೇಶ್ ಇಂಗಳೇವಾರ್, ಮಂಜುನಾಥ್ ಗುಮ್ಮಗೋಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕರ್ತವ್ಯ ನಿರತ ಸಿಬ್ಬಂದಿ ಅಡ್ಡಿಪಡಿಸಿ ಹಲ್ಲೆ ಮಾಡಿ ಕೊಲೆ ಯತ್ನ ಹಿನ್ನೆಲೆಯಲ್ಲಿ BNS ಸೆಕ್ಷನ್ 115(2), 109(1), 118(2), 117(2), 123, 121, 223, 324, 189, 189 (3), 191 (2) 190 ಅಡಿ ಕೇಸ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ