ಪ್ರಗತಿವಾಹಿನಿ ಸುದ್ದಿ: ಒಂದೆಡೆ ಬರಗಾಲ, ಇನ್ನೊಂದೆಡೆ ಕುಡಿಯುವ ನೀರಿಗೂ ಸಮಸ್ಯೆ ಇಂತಹ ಸ್ಥಿತಿಯಲ್ಲಿಯೂ ಕೆಲ ರೈತರು ಕಷ್ಟಪಟ್ಟು ಕೃಷಿ ಚಟುವಟಿಕೆ ನಡೆಸಿದ್ದಾರೆ. ಇಲ್ಲೋರ್ವ ರೈತ ಬೆಳೆದಿದ್ದ ಪರಂಗಿ ಹಣ್ಣಿನ ತೋಟಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ತೋತವನ್ನೇ ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ಕಡಿಘಟ್ಟ ಗ್ರಾಮದಲ್ಲಿ ರೈತ ಬೆಳೆದಿದ್ದ ಪಪ್ಪಾಯ ತೋಟ ಬೆಂಕಿಗಾಹುತಿಯಾಗಿದೆ. ನಾಗರಾಜ್ ಎಂಬುವವರ ಪಪ್ಪಾಯ ತೋತಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ.
2000ಕ್ಕೂ ಹೆಚ್ಚು ಪರಂಗಿ ಗಿಡಗಳು ಬೆಂಕಿಗಾಹುತಿಯಾಗಿವೆ. ರೈತ ನಾಗರಾಜ್ ಸಂಬಮ್ಧಿಕರ ಮನೆಗೆಂದು ಹೋಗಿದ್ದರು. ವಾಪಾಸ್ ಬರುವಷ್ಟರಲಿ ತೋಟ ಸಂಪೂರ್ಣ ಬೆಂಕಿಯಲ್ಲಿ ಸುಟ್ಟುಹೋಗಿದೆ. ದುಷ್ಕರ್ಮಿಗಳ ಕೃತ್ಯಕ್ಕೆ ರೈತ ಕಣ್ಣೀರಿಟ್ಟಿದ್ದಾರೆ.
3 ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ