Kannada NewsKarnataka News

ಜಲಾಶಯ ಆವರಣದಲ್ಲಿ ಉದ್ಯಾನವನ – ಶಶಿಕಲಾ ಜೊಲ್ಲೆ

 ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ನಗರದ ಜವಾಹರ ಜಲಾಶಯ ಆವರಣದಲ್ಲಿ ಉದ್ಯಾನವನದ ಅಭಿವೃದ್ಧಿ ಹಾಗೂ ಸುಶೋಭಿಕರಣದ ಕಾರ್ಯ ಕೈಗೆತ್ತಿಕೊಂಡಿದ್ದು ದೇಶದ ಸಂಸ್ಕೃತಿ ಬಿಂಬಿಸುವ ಅನೇಕ ಮೂರ್ತಿಗಳು ಇಲ್ಲಿ ಕಾಣಸಿಗಲಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿ ಇಲ್ಲಿ ರೂ.೫ ಕೋಟಿ ವೆಚ್ಚದಲ್ಲಿ ಬಾಲಭವನ ನಿರ್ಮಿಸಲಾಗುವುದು ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ಜವಾಹರ ಜಲಾಶಯ ಆವರಣದಲ್ಲಿ ೨೦೨೦-೨೧ನೇ ಅನುದಾನದಡಿಯಲ್ಲಿ ೧೫ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ ರೂ.೩೦ ಲಕ್ಷ ವೆಚ್ಚದಲ್ಲಿ ಉದ್ಯಾನವನದ ನಿರ್ಮಾಣ ಹಾಗೂ ರೂ.೧೪ ಲಕ್ಷ ವೆಚ್ಚದ ಸುಶೋಭಿಕರಣ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿದ ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆಯಾದ ದಿ ನರ್ಸರಿ ಮ್ಯಾನ್ ಕೋ-ಆಪರೇಟಿವ್ ಸಂಸ್ಥೆಗೆ ಈ ಕಾಮಗಾರಿ ನೀಡಲಾಗಿದ್ದು ಮಕ್ಕಳು ಸೇರಿದಂತೆ ಸಾರ್ವಜನಿಕರಿಗಾಗಿ ಇದೊಂದು ಆಕರ್ಷಕ ಪಿಕ್‌ನಿಕ್ ಪಾಯಿಂಟ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ಮಕ್ಕಳಿಗಾಗಿ ಪುಟಾಣಿ ರೈಲು ಸಹ ಇಲ್ಲಿ ಸಂಚರಿಸಲಿದೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ಧಿಪರ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಮಾತನಾಡಿ ಕೋವಿಡ್-೧೯ರ ಎರಡನೇಯ ಅಲೆಯಲ್ಲಿ ಜೊಲ್ಲೆ ದಂತಿಯ ಕಾರ್ಯ ಎಲ್ಲರೂ ಮೆಚ್ಚುವಂತಹದ್ದಾಗಿತ್ತು. ಯಾವುದೆ ಅನಾಹುತವಿಲ್ಲದೆ ಸಾವಿರಾರು ರೋಗಿಗಳು ಜೊಲ್ಲೆ ಕೇರ್ ಸೆಂಟರ್‌ದಿಂದ ಗುಣಮುಖರಾಗಿ ಹೋಗಿದ್ದಾರೆ. ಈಚೆಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು ೧೬೦೦ಕ್ಕೂ ಅಧಿಕ ಹಿರಿಯ ನಾಗರಿಕರು ಲಾಭ ಪಡೆದುಕೊಂಡಿದ್ದಾರೆ ಎಂದರು.
ಸ್ಥಳೀಯ ಜವಾಹರ ಜಲಾಶಯಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದೆ ಅಣ್ಣಾಸಾಹೇಬ ಜೊಲ್ಲೆ ಬಾಗಿನ ಅರ್ಪಿಸಿದರು.
ಈ ಸಂಸದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಸಂಚಾಲಕ ವಿಶ್ವನಾಥ ಕಮತೆ, ಸಮಿತ ಸಾಸನೆ, ನಗರಸಭೆಯ ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರಮನ್ ಸದ್ದಾಂ ನಗಾರಜಿ, ಸದಸ್ಯರು, ಸೇರಿದಂತೆ ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಭಗವಾನ ಶ್ರೀಕೃಷ್ಣನ ಆವಿರ್ಭಾವದ ನಿರೀಕ್ಷೆಯಲ್ಲಿ . .  .

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button