Latest

ಸರಕಾರಿ ನೌಕರರಿಗೆ ಪಾಸ್ ಪೋರ್ಟ್; ಹೊಸ ಸುತ್ತೋಲೆ ಜಾರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ನೌಕರರಿಗೆ ಪಾಸ್ ಪೋರ್ಟ್ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದೆ.

ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಉಪ ಕಾರ್ಯದರ್ಶಿ ಜ್ಯೋತಿ ಜೆ.ಆರ್. ಆದೇಶ ತಕ್ಷಣದಿಂದ ಜಾರಿ ಬರುವಂತೆ ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರದ ಬಿ, ಸಿ ಹಾಗೂ ಡಿ ವೃಂದದ ಅಧಿಕಾರಿ ನೌಕರರು ಪಾಸ್ ಪೋರ್ಟ್ ಪಡೆಯಲು ಅಗತ್ಯವಿರುವ ನಿರಾಕ್ಷೇಪಣಾ ಪತ್ರವನ್ನು ನೀಡುವ ಕುರಿತು ಸುತ್ತೋಲೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿದಾರ ನೌಕರ/ ಅಧಿಕಾರಿ ವಿರುದ್ಧ ಕಠಿಣ ದಂಡನೆ ವಿಧಿಸಬಹುದಾದ ಶಿಸ್ತಿನ ಪ್ರಕರಣಗಳು ಬಾಕಿ ಇದ್ದಲ್ಲಿ ಅಥವಾ ಪ್ರಕರಣಗಳು ಹೂಡಲು ಉದ್ದೇಶಿಸಿದಲ್ಲಿ,

ಲೋಕಾಯುಕ್ತ ಪ್ರಕರಣ/ ಎಸಿಬಿ ಪ್ರಕರಣ/ ವಿಜಿಲೆನ್ಸ್ ಪ್ರಕರಣಗಳು ಬಾಕಿ ಇದ್ದಲ್ಲಿ ಅಥವಾ ಹೂಡಲು ಉದ್ದೇಶಿಸಿದಲ್ಲಿ,

ಗುರುತರ ಕ್ರಿಮಿನಲ್/ ನ್ಯಾಯಾಂಗ ವಿಚಾರಣೆ ಬಾಕಿ ಇದ್ದಲ್ಲಿ ಅಥವಾ ಹೂಡಲು ಉದ್ದೇಶಿಸಿದಲ್ಲಿ,

ಭಾರತದ ಸಾರ್ವಭೌಮತ್ವ, ಭದತೆಗೆ ಧಕ್ಕೆ ತರುವಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಸಂಬಂಧಿಸಿದ ಸಂಸ್ಥೆಯ ಏಜೆನ್ಸಿಗಳಲ್ಲಿ ದಾಖಲಾಗಿದ್ದ ವಿಚಾರಣೆ ಪ್ರಗತಿ ಇದ್ದಲ್ಲಿ ನಿರಾಕ್ಷೇಪಣಾ ಪತ್ರವನ್ನು ನೀಡುವಂತಿಲ್ಲ.

ಉಳಿದಂತೆ ಗ್ರೂಪ್ ಎ ವೃಂದದ ಅಧಿಕಾರಿಗಳು ಪಾಸ್ ಪೋರ್ಟ್ ಪಡೆಯಲು ಅಗತ್ಯವಿರುವ ನಿರಾಕ್ಷೇಪಣಾ ಪತ್ರವನ್ನು ಸರಕಾರದ ಹಂತದಲ್ಲಿ ಪಡೆಯುವ ಸೂಚನೆ ನೀಡಲಾಗಿದೆ.

10ನೇ ದಿನಕ್ಕೆ ಕಾಲಿಟ್ಟ ಯುದ್ಧ; ಹೊರನಡೆದ ಪ್ರಮುಖ ವಾಹಿನಿಗಳು; 9000 ರಷ್ಯನ್ ಸೈನಿಕರ ಸಾವು ಎಂದ ಉಕ್ರೇನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button