Kannada NewsLatest

ಗುಣಮುಖರಾದ “ಸಿದ್ದೇಶ್ವರ ಸ್ವಾಮೀಜಿ” ; ಪ್ರವಚನದ ದಿನಾಂಕ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈಚೆಗೆ ಆಕಸ್ಮಿಕವಾಗಿ ಬಿದ್ದು ಬಲ ಭುಜ ಹಾಗೂ ತೊಡೆಯ ಮೇಲ್ಭಾಗದ ಮೂಳೆ ಮುರಿತವಾಗಿದ್ದರಿಂದ ಗಾಯಗೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ “ಸಿದ್ದೇಶ್ವರ ಸ್ವಾಮೀಜಿ” ಈಗ ಬಹುತೇಕ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿಯಲ್ಲಿರುವ ಸಿದ್ಧಗಿರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಭಕ್ತರ ಮುಖದಲ್ಲಿ ಸಂತಸ ಮೂಡಿದೆ.

ಗುಣಮುಖರಾದ ಶ್ರೀಗಳು ನಿನ್ನೆ ( ಶುಕ್ರವಾರ)  ನಿಪ್ಪಾಣಿಯ ವಿರೂಪಾಕ್ಷಲಿಂಗ ಸಮಾಧಿ ಮಠಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿ ಈ ಮಠದಲ್ಲಿ ಮಾರ್ಚ್‌ 6ರಿಂದ ಬೆಳಿಗ್ಗೆ 6.30ರಿಂದ 7.30ರವರೆಗೆ ಪ್ರವಚನ ನೀಡಲಿದ್ದಾರೆ. ಗುಣಮುಖರಾದ ಬಳಿಕ ಶ್ರೀಗಳ ಮೊದಲ ಪ್ರವಚನ ಇದಾಗಿದ್ದು, ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಲು ಉತ್ಸುಕರಾಗಿದ್ದಾರೆ.

ನೇರ ಪ್ರಸಾರದಲ್ಲಿಯೇ ಪುಟಿನ್ ವಿರುದ್ಧ ಕಿಡಿ; ರಾಜೀನಾಮೆ ನೀಡಿದ ರಷ್ಯಾ ಟಿವಿ ಚಾನಲ್ ಸಿಬ್ಬಂದಿಗಳು

Related Articles

Back to top button