
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪಟಾಕಿ ನಿಷೇಧ ಸಂಬಂಧ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿ ಸಂಬಂಧ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ.
ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಲಾಗಿದೆ ಎಂದು ಸುದ್ದಿ ಪ್ರಸಾರ ಆಗುತ್ತಿದೆ. ಇದು ತಪ್ಪು ಗ್ರಹಿಕೆ. ಮದುವೆ, ರಾಜಕೀಯ ಇನ್ನಿತರೆ ಕಾರ್ಯಕ್ರಮಗಳಿಗೆ ಪಟಾಕಿ ನಿಷೇಧವಾಗಿದೆ. ಆದರೆ ಹಸಿರು ಪಟಾಕಿಗೆ ಅವಕಾಶ ಇದೆ.
ದೀಪಾವಳಿಗೆ ರೆಗ್ಯುಲರ್ ಪಟಾಕಿಗೂ ಅವಕಾಶ ಇದೆ. ಆದರೆ ಲೈಸೆನ್ಸ್ ನಿಯಮಗಳನ್ನು ಉಲ್ಲಂಘಿಸುವವರ ಲೈಸೆನ್ಸ್ ಮಾತ್ರ ರದ್ದಾಗಲಿದೆ.
ದೀಪಾವಳಿಗೂ ಹಸಿರು ಪಟಾಕಿ ಸಿಡಿಸುವುದು ಮಕ್ಕಳ ಆರೋಗ್ಯ, ಸುರಕ್ಷತೆ ಮತ್ತು ಪರಿಸರಕ್ಕೂ ಒಳ್ಳೆಯದು ಎನ್ನುವ ಚರ್ಚೆ ನಡೆದಿದೆ ಅಷ್ಟೆ. ಆದರೆ ದೀಪಾವಳಿಗೆ ಯಾವ ಪಟಾಕಿಯನ್ನೂ ನಿಷೇಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ