ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಪಟಾಕಿ ಸಿಡಿದು ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ.
ಪ್ರದೀಪ್ (30) ಮೃತ ಯುವಕ. ಮನೆಯಲ್ಲಿ ಕುಳಿತುಕೊಳ್ಳುವ ಚೇರ್ ಕೆಳಗೆ ಪಟಾಕಿ ಬ್ಯಾಗ್ ಇಡಲಾಗಿತ್ತು. ಚೇರ್ ಮೇಲೆ ಪ್ರದೀಪ್ ಕುಳಿತುಕೊಂಡಿದ್ದ. ಈ ವೇಳೆ ಹೊರಗಡೆ ಸಿಡಿಸುತ್ತಿದ್ದ ಪಟಾಕಿಯ ಕಿಡಿಕೊಂದು ಚೇರ್ ಕೆಳಗಿದ್ದ ಬ್ಯಾಗ್ ಗೆ ತಗುಲಿ ಬ್ಯಾಗ್ ನಲ್ಲಿದ್ದ ಪಟಾಕಿ ಸಿಡಿದು ಸ್ಫೋಟಗೊಂಡಿದೆ.
ಪಟಾಕಿ ಸಿಡಿದು ಸ್ಫೋಟಗೊಂಡ ತೀವ್ರತೆಗೆ ಚೇರ್ ಮೇಲೆ ಕುಳಿತಿದ್ದ ಪ್ರದೀಪ್ 5 ಅಡಿ ದೂರ ಹಾರಿ ಬಿದ್ದಿದ್ದಾನೆ. ಸ್ಥಳದಲ್ಲೇ ಪ್ರದೀಪ್ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಮನೆಯ ಗಾಜುಗಳು ಕೂಡ ಪುಡಿ, ಪುಡಿಯಾಗಿದ್ದು, ಘಟನೆಯ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ