
ಪಾಕಿಸ್ತಾನದಲ್ಲಿ ಅಪರಿಚಿತರಿಂದ ಉಗ್ರ ಶಹಿದ್ ಲತೀಫ್ ಹತ್ಯೆ
ಪ್ರಗತಿವಾಹಿನಿ ಸುದ್ದಿ; ಸಿಯಾಲ್‌ಕೋಟ್: 2016ರಲ್ಲಿ ಪಂಜಾಬ್‌ನ ಪಠಾಣ್‌ಕೋಟ್ ನಲ್ಲಿರುವ ವಾಯುನೆಲೆ ಮೇಲೆ ಜೈಶ್-ಮೊಹಮ್ಮದ್ ಉಗ್ರರ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 7 ಯೋಧರು ಹುತಾತ್ಮರಾಗಿದ್ದರು. ಇದೀಗ ಅದರ “ಮಾಸ್ಟರ್ ಮೈಂಡ್” ಉಗ್ರ ಶಹಿದ್ ಲತೀಫ್ ನ ಹತ್ಯೆಯಾಗಿದೆ.
ಲತೀಫನೇ ಪಠಾಣ್‌ಕೋಟ್ ದಾಳಿಯ ರೂವಾರಿ ಎಂಬುದು NIA ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕನ ಅಂತ್ಯ ಕಂಡಿದೆ.
ಸಿಯಾಲ್‌ಕೋಟ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.