ಕಸನಾಳ ಗ್ರಾಮದ ಜನರ ಆರೋಗ್ಯದ ಕಡೆ ಗಮನ ವಹಿಸಿ: ಅಧಿಕಾರಿಗಳಿಗೆ ಶಾಸಕಿ ಶಶಿಕಲಾ ಜೊಲ್ಲೆ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೋರಗಾಂವ : ನಿಪ್ಪಾಣಿ ತಾಲೂಕಿನ ಕಸನಾಳ ಗ್ರಾಮದಲ್ಲಿ ಗ್ರಾಸ್ಟ್ರೋ ಕಾಯಿಲೆ ಉಲ್ಬಣದಿಂದ ಗ್ರಾಮದ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ.ಕಲುಷಿತ ನೀರು ಸೇವನೆಯಿಂದ ಅನೇಕರಿಗೆ ಈ ಕಾಯಿಲೆ ಉಂಟಾಗಿದ್ದು ,ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಾತ್ರ ಅಧಿಕಾರಿಗಳು ಜನರ ಆರೋಗ್ಯ ಕಡೆ ಗಮನ ಹರಿಸಬೇಕು. ಎಂದು ಶಾಸಕಿ ಶಶಿಕಲಾ ಜೊಲ್ಲೆ ಆರೋಗ್ಯ ಅಧಿಕಾರಿ ಸೇರಿದಂತೆ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮೀಪದ ಕಸನಾಳ ಗ್ರಾಮದಲ್ಲಿ ನೀರು ಕಲುಷಿತಗೊಂಡು ಗ್ರಾಸ್ಟ್ರೋ ಕಾಯಿಲೆ ಉಲ್ಬಣಗೊಂಡು ಸಾರ್ವಜನಿಕರಿಗೆ ಹೊಟ್ಟೆ ತೊಂದರೆ ಸೇರಿದಂತೆ ವಾಂತಿ ಭೇದಿ ಆಗುತ್ತಿದ್ದು, ಸ್ಥಳಕ್ಕೆ ಶುಕ್ರವಾರ ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ತಾಲೂಕ ಅಧಿಕಾರಿಗಳೊಂದಿಗೆ ಭೇಟಿ ನೀಡಿ,ಪರಿಶೀಲನೆ ನಡೆಸಿದರು.
ಬಳಿಕ ಶಶಿಕಲಾ ಜೊಲ್ಲೆ ಮಾತನಾಡಿ, ಎರಡು ದಿನಗಳಿಂದ ವೈಧಾಧಿಕಾರಿಗಳಿಂದಿಗೆ ಕರೆ ಮುಖಾಂತರ ಸಂಪರ್ಕ ಮಾಡಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಮೊದಲೇ ತಿಳಿಸಲಾಗಿತ್ತು.ಈಗ ಸಾರ್ವಜನಿಕರ ಮುನ್ನಚ್ಚರಿಕೆ ಕ್ರಮವಾಗಿ 1 ಆಂಬುಲೆನ್ಸ್,ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್,ನರ್ಸಿಂಗ್ ಸಿಬ್ಬಂದಿಗಳು , ನೀರು ಟ್ಯಾಂಕರ್ ವ್ಯವಸ್ಥೆ ಮಾಡಿದ್ದು ಆರೋಗ್ಯದ ಹಿತ ದೃಷ್ಟಿಯಿಂದ ಪೂರ್ವ ಮುನ್ನಚ್ಚರಿಕೆ ಕ್ರಮವಾಗಿ ಔಷಧಿ (ಟ್ಯಾಬ್ಲೆಟ್) ಕಿಟ್ ಗಳನ್ನೂ ನೀಡಲಾಗಿದೆ . ಕಾಯಿಲೆ ಬಗ್ಗೆ ಜನರು ಚಿಂತಿಸುವ ಅಗತ್ಯವಿಲ್ಲ.ಜನರ ಆರೋಗ್ಯದ ಹಿತಕ್ಕಾಗಿ ನಮ್ಮ ಪ್ರಯತ್ನ ವಿದೆ. ಜನರ ಆರೋಗ್ಯ ಕಾಪಾಡೋದು ನಮ್ಮೆಲ್ಲರ ಕರ್ತವ್ಯವಾಗಿದ್ದು , ಎಲ್ಲ ಅಧಿಕಾರಿಗಳು ಗ್ರಾಮದ ಆರೋಗ್ಯದ ಹಿತದೃಷ್ಟಿಯಿಂದ ವಿಶೇಷ ಗಮನ ಹರಿಸಿ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಯಿಲೆಯಿಂದ ನಿಧನರಾದ ಪಾಂಡುರಂಗ ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ತಾಲೂಕ ವೈಧ್ಯಾಧಿಕಾರಿಗಳಾದ ಡಾ.ಸುಕಮಾರ ಭಾಗಾಯಿ, ತಾಲೂಕ ಪಂಚಾಯತ್ ಇ.ಓ. ಪ್ರವೀಣ ಕಟ್ಟಿ, ಪಿಡಿಓ ನಂದಕುಮಾರ್ ಫಪ್ಪೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೂನಸ್ ಮುಲ್ಲಾ, ಸದಸ್ಯ ಅಜಯ್ ಪಾಟೀಲ್ ಮಂಗೇಶ ಅರಗೆ ,ಸದಲಗಾ ಪೀ.ಎಸ್.ಐ.ಈರೆಗಾನ, ವಿಶ್ವಾಸ ನಾಯಿಕ,ಅಜಿತ ಪಾಟೀಲ,ಸಂಭಾಜಿ ಕೊಕರೆ,ನಾನಾ ಪಾಟೀಲ,ಜೀವನ ಕಾಂಬಳೆ, ಕವಿತಾ ಲೊಂಡೆ,ಜಯಸಿಂಗ್ ಲೋಂಡೆ, ಬಾಜಿರಾವ ಕೋಳಿ ,ಸುಕಮಾರ ಚೌಗಲೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ