ಪ್ರಗತಿವಾಹಿನಿ ಸುದ್ದಿ, ಬೆಳಗಾವಿವೇತನ’ ಶಿಕ್ಷಕರ ಹಕ್ಕಾಗಬೇಕೆ ಹೊರತು ‘ಅನುದಾನ’ವಲ್ಲ ಎಂದು ಕೆಪಿಸಿಸಿ ಶಿಕ್ಷಕರ ಹಾಗೂ ಪದವೀಧರರ ಕೋಶದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಬಿ. ಬನ್ನೂರ ಸರಕಾರಕ್ಕೆ ಚಾಟಿ ಬೀಸಿದ್ದಾರೆ.:’
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಅನುದಾನ ಶಬ್ದದ ಅಡಿ ದುಡಿಯುವ ಶಿಕ್ಷಕರು/ ಉಪನ್ಯಾಸಕರಿಗೆ ಇಂದು ವೇತನ( salary)ಸಿಗುತ್ತಿಲ್ಲ. ಬದಲಾಗಿ ಸರಕಾರ ಅನುದಾನ ರೂಪದಲ್ಲಿ ನೀಡುವ ‘ದಾನ’ ನಮಗೆ ಬೇಕಿಲ್ಲ ಎಂದರು.
ಸರಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ರೆಗ್ಯುಲರ್ ಮಾಡುತ್ತಿಲ್ಲ. ಸಾಕಷ್ಟು ವಿದ್ಯಾರ್ಹತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕಳೆದ 15ವರ್ಷಗಳಿಂದ ಖಾಲಿ ಕೈಯಿಂದ ದುಡಿಯುತ್ತಿರುವ ಇಂತಹ ಉಪನ್ಯಾಸಕರನ್ನು ಖಾಯಂ ಮಾಡಿ ಸರಕಾರ ವೇತನ ಕೊಡಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ಜೆಓಸಿ ಉಪನ್ಯಾಸಕರ ಪೈಕಿ ಇನ್ನೂ 500 ಜನ ಸೇವೆಯಲ್ಲಿ ಖಾಯಂ ಆಗದೇ ಉಳಿದಿದ್ದಾರೆ ಎಂದು ಸರಕಾರದ ತೀವ್ರ ಗಮನ ಸೆಳೆದರು.
ಶಿಕ್ಷಣ ಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರು ಈ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಪ್ರತಿ ತಾಲೂಕಿನಲ್ಲಿರುವ ಸರಕಾರಿ ಮತ್ತು ಅನುದಾನಿತ ಜ್ಯೂನಿಯರ್ ಕಾಲೇಜುಗಳು ಇವೆ. ಅದರಂತೆ ಖಾಸಗಿ ಅನುದಾನಿತ ಉಪನ್ಯಾಸಕರಿಗೆ ಸರಕಾರಿ ಉಪನ್ಯಾಸಕರಂತೆ ವೇತನ ಕೊಡಲು ಆಗ್ರಹಿಸಿದರು.
ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿರುವ ಯಾವ ಪರಿಷತ್ ಸದಸ್ಯರು ಸಹ ಈ ಬಗ್ಗೆ ‘ಚ’ ಕಾರ ಎತ್ತುತ್ತಿಲ್ಲ. ಶಿಕ್ಷಕರು ಮತ್ತು ಉಪನ್ಯಾಸಕರ ಏಳ್ಗೆಯಹೆಸರಲ್ಲಿ ಆಯ್ಕೆ ಆಗಿ ವಿಧಾನಸೌಧಕ್ಕದ ಹೋಗಿರುವ ಎಂಎಲ್ಸಿಗಳು ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ಅನುದಾನಿತ ಶಾಲೆ, ಕಾಲೇಜುಗಳಲ್ಲಿ ನಾನ್ ಟೀಚಿಂಗ್ ಸ್ಟಾಪ್ ಗಳೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಮಾಸ್ತ,ಲೆಕ್ಕಿಗರು, ಅಟೆಂಡರ್ಸ್ ಇಲ್ಲದೇ ಸಂಸ್ಥೆ ಹೇಗೆ ನಡೆಸಬೇಕು. ಆರ್ಥಿಕ ಮಿಥವ್ಯಯ ಹೆಸರಿನಲ್ಲಿ ಶಿಕ್ಷಣ ಕ್ಷೇತ್ರ ಸರಕಾರ ಹಾಳು ಮಾಡಬಾರದು ಎಂದು ಸರಕಾರವನ್ನು ಆಗ್ರಹಿಸಿದರು.
ಶಿಕ್ಷಣ ಇಲಾಖೆ ಅವಶ್ಯಕ ಇಲಾಖೆಯಾಗಿದ್ದು ಯಾವುದೇ ಕಾರಣಕ್ಕೂ ಆರ್ಥಿಕ ಅನುದಾನ ಸರಕಾರ ತಡೆಹಿಡಿಯಬಾರದು ಎಂದರು.
ಚುನಾವಣೆ ಕೆಲಸದಲ್ಲಿ ನಿರತರಾಗಿದ್ದ ಶಿಕ್ಷಕರು ಕರೋನಾ ರೋಗಕ್ಕೆ ಬಲಿ ಆಗಿದ್ದು ಅವರಿಗೆ ಇನ್ನೂವರೆಗೆ ಪರಿಹಾರ ಕೊಟ್ಟಿಲ್ಲ. ಅವರ ಅವಲಂಬಿತರಿಗೆ ಅನುಕಂಪದ ನೌಕರಿ ಸಹ ಸರಕಾರ ಕೊಡುತ್ತಿಲ್ಲ ಎಂದು ಸರಕಾರದ ಗಮನ ಸೆಳೆದರು.
ಶಾಮಪ್ರಸಾದ, ಪ್ರಭು ಶಿವನಾಯಕರ, ಕೆ. ಬಿ. ಹಿರೇಮಠ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ