Karnataka News

*ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುತ್ತಿದ್ದ ಪಿಡಿಓ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ : ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುತ್ತಿದ್ದ ಪಿಡಿಓ ಯೋಗೇಂದ್ರ ಅರೆಸ್ಟ್ ಆಗಿದ್ದಾನೆ. ಪೊಲೀಸರ ಕಣ್ಣುತಪ್ಪಿಸಿ ಓಡಾಡ್ತಿದ್ದ ಆಸಾಮಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಒಬ್ಬರಿಗೆ ವಿಧಾನಸೌಧ ಸ್ಪೀಕರ್‌ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯೋಗೇಂದ್ರ ಮೋಸ ಮಾಡಿದ್ದ. ಮತ್ತೊಬ್ಬರಿಗೆ ಗೋಲ್ಡ್ ಬ್ಯುಸಿನೆಸ್‌ ಹೆಸರಲ್ಲಿ ವಂಚನೆ ಮಾಡಿದ್ದ. ಇನ್ನೊಬ್ಬರಿಗೆ ಕ್ರಿಪ್ಟೋ ಕರೆನ್ಸಿ ಬ್ಯುಸಿನೆಸ್‌ ಹೆಸರಲ್ಲಿ ಟೋಪಿ ಹಾಕಿದ್ದ. ಇದೀಗ ವಂಚಕ ಪಿಡಿಓ ಯೋಗೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ದುಬೈನಲ್ಲಿ ತಲೆಮರೆಸಿಕೊಂಡಿದ್ದ ಯೋಗೇಂದ್ರ ಬೆಂಗಳೂರಿಗೆ ವಾಪಸ್ ಆದ ತಕ್ಷಣ ಲಾಕ್ ಆಗಿದ್ದಾನೆ.

Home add -Advt

ಒಬ್ಬೊಬ್ಬರಿಗೆ ಕೋಟಿಗಟ್ಟಲೇ ಟೋಪಿ ಹಾಕಿರೋ ವಂಚಕ ಯೋಗೇಂದ್ರ, ದುಬೈಗೆ ಪರಾರಿಯಾಗಿದ್ದನು. ಬೆಂಗಳೂರಿಗೆ ವಾಪಸ್ ಆದ ವೇಳೆ ಏರ್ ಪೋರ್ಟ್ ನಲ್ಲಿಯೇ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪಿಡಿಓ ಯೋಗೇಂದ್ರ ವಿರುದ್ಧ ಚೆನ್ನಮ್ಮನಕೆರೆ, ಯಲಹಂಕ ನ್ಯೂಟೌನ್ ವಿವಿ ಪುರಂ, ಹಿರಿಯೂರು, ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಆರೋಪಿ ವಿರುದ್ಧ ಎಲ್ ಓಸಿ ಕೂಡ ಜಾರಿಯಾಗಿತ್ತು. ರಾಜ್ಯದ ವಿವಿಧ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

Related Articles

Back to top button