Kannada NewsKarnataka NewsLatest

ಮುತ್ತಿನ ಹಾರ, ಮುನ್ನೂರು ಚಸ್ಮ, ಮೂರು ಸಾವಿರ ಚೆಲುವೆಯರು; ಅಂಜಲಿ ನಿಂಬಾಳಕರ್ ಮಹಿಳಾ ದಿನಾಚರಣೆ ವಿಶೇಷ

 ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಶಾಸಕಿ ಅಂಜಲಿ ನಿಂಬಾಳಕರ್ ಭಾನುವಾರ ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆ ಆಯೋಜಿಸಿದ್ದರು.

ಸುಮಾರು 3 ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಸೇರಿದ್ದರು. ಅವರಿಗಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಟಿಬಿ, ಕೊರೋನಾ, ಕಣ್ಣಿನ ಆರೋಗ್ಯ ಮೊದಲಾದವುಗಳ ತಪಾಸಣೆ ನಡೆಸಲಾಯಿತು.

ದೃಷ್ಟಿ ದೋಷ ಹೊಂದಿದ್ದ 300 ಜನರಿಗೆ ಕನ್ನಡಕ ವಿತರಿಸಲಾಯಿತು.

5 ವರ್ಷದ ಬಾಲಕಿಯೋರ್ವಳು  ಶಾಸಕಿ ಅಂಜಲಿ ನಿಂಬಾಳಕರ್ ಅವರ ಕೊರಳಿಗೆ ಮುತ್ತಿನ ಹಾರವನ್ನು ಹಾಕುವ ಮೂಲಕ ಮಹಿಳಾ ದಿನಾಚರಣೆಯ ಕಾಣಿಕೆ ನೀಡಿದಳು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button