ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ ಶಮ್ಕರ್ ಮಿಶ್ರಾಗೆ ನಾಲ್ಕು ತಿಂಗಳ ಕಾಲ ವಿಮಾನ ಯಾನ ನಿಷೇಧಿಸಲಾಗಿದೆ.
ನವೆಂಬರ್ 26ರಂದು ನ್ಯೂಯಾರ್ಕ್ ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ತನ್ನ ಸಹಾ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಎಂದು ಖುದ್ದು ಮಹಿಳೆ ದೂರು ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಏರ್ ಇಂಡಿಯಾ ಎರ್ ಲೈನ್ಸ್ ಶಂಕರ್ ಮಿಶ್ರಾಗೆ 4 ತಿಂಗಳ ಕಾಲ ನಿಷೇಧ ಹೇರಿದೆ.
ಮೂತ್ರವಿಸರ್ಜನೆ ಪ್ರಕರಣದ ಬಳಿಕ ಮುಂಬೈ ಮೂಲದ ಶಂಕರ್ ಮಿಶ್ರಾ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ. ನಾಲ್ಕು ವಾರಗಳ ಬಳಿಕ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಘಟನೆ ಬಳಿಕ ಶಂಕರ್ ಮಿಶ್ರಾನನ್ನು ವೇಲ್ಸ್ ಫಾರ್ಗೋ ಕಂಪನಿ ಆತನನ್ನು ಕೆಲಸದಿಂದ ವಜಾಗೊಳಿಸಿತ್ತು. ಉದ್ಯೋಗಿ ಶಂಕರ್ ಮಿಶ್ರಾ ವೃತ್ತಿಪರ ಹಾಗೂ ವೈಯಕ್ತಿಕವಾಗಿ ಉತ್ತಮ ನಡವಳಿಕೆ ಹೊಂದಿದ್ದಾರೆ. ಆದರೆ ಇವರ ಮೇಲಿನ ಆರೋಪ ನಮ್ಮ ಕಂಪನಿಗೆ ಕೆಟ್ಟಹೆಸರು ತಂದಿದೆ ಎಂದು ಕಂಪನಿ ತಿಳಿಸಿದೆ.
*ಕನ್ನಡ ಚಿತ್ರರಂಗದ ಯುವನಟ ಧನುಷ್ ಇನ್ನಿಲ್ಲ*
https://pragati.taskdun.com/sandalwoodactordhanushdeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ