ಮೂಕಪ್ರಾಣಿಗಳ ನೋವಿಗೆ ಮಿಡಿದ ಪೇಜಾವರ ಶ್ರೀ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಲ್ಲಿ ಸುಮಾರು 60 ಸಾವಿರ ಜಾನುವಾರುಗಳು ಸಂತ್ರಸ್ತವಾಗಿವೆ. ಈ ಪ್ರಾಣಿಗಳಿಗೆ ಮೇವು ಪೂರೈಸುವುದೇ ಸರಕಾರಕ್ಕೆ ದೊಡ್ಡ ಸವಾಲಾಗಿವೆ. ಸಾಕಷ್ಟು ಸಂಘ-ಸಂಸ್ಥೆಗಳೂ ಸಹಾಯ ನೀಡಿದ್ದರೂ ಅದು ಸಾಲುತ್ತಿಲ್ಲ. ಈ ಮೂಕ ಪ್ರಾಣಿಗಳ ನೋವಿಗೆ ಸ್ಪಂದಿಸುವುದೇ ಕಷ್ಟವಾಗಿದೆ.
ಇದನ್ನೂ ಓದಿ – ದುರುಪಯೋಗ ಆಗದಿರಲಿ ಪ್ರವಾಹ ಪರಿಹಾರ; ಇಂದು ಡಿಸಿ ಮಾರ್ಗಸೂಚಿ
ಇಂತಹ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳು ಜಾನುವಾರುಗಳ ಆಹಾರಕ್ಕಾಗಿಯೇ ದೇಣಿಗೆ ನೀಡಿದ್ದಾರೆ. ಅವರು 5 ಲಕ್ಷ ರೂ.ಗಳನ್ನು ಕಳುಹಿಸಿಕೊಟ್ಟಿದ್ದು, ರಾಷ್ಟ್ರೀಯ ಸ್ವಂಯಂ ಸೇವಕ ಸಂಘದ ಸಂತ್ರಸ್ತ ನಿಧಿ ಮೂಲಕ ಜಾನುವಾರುಗಳ ಮೇವಿಗೆ ಬಳಸುವಂತೆ ಸೂಚಿಸಿದ್ದಾರೆ.
ಶ್ರೀಗಳು ಕಳುಹಿಸಿದ ಹಣದಲ್ಲಿ ಜಾನುವಾರ ಆಹಾರ ಖರೀದಿಸಿ ಅಥಣಿ, ಮುಧೋಳ ಹಾಗೂ ಜಮಖಂಡಿ ಪ್ರದೇಶದಲ್ಲಿ ಹಂಚಲಾಗಿದೆ.
ಇದನ್ನೂ ಓದಿ – ಪ್ರವಾಹ ಸಂತ್ರಸ್ತರಿಗೆ ನೀವೂ ಸಹಾಯ ಹಸ್ತ ಚಾಚಬಹುದು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ