Kannada NewsKarnataka NewsLatest

*ತುಲಾಭಾರದ ವೇಳೆ ಪೇಜಾವರ ಶ್ರೀಗಳ ಮೇಲೆ ತುಂಡಾಗಿಬಿದ್ದ ತಕ್ಕಡಿ ಸರಳು*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತುಲಾಭಾರದ ವೇಳೆ ಅವಘಡ ಸಂಭವಿಸಿದ್ದು, ತುಲಾಭಾರದ ತಕ್ಕಡಿ ಹಗ್ಗ ತುಂಡಾಗಿ ತಕ್ಕಡಿಯ ಸರಳು ಶ್ರೀಗಳ ತಲೆಯಮೇಲೆ ಬಿದ್ದ ಘಟನೆ ನಡೆದಿದೆ.

ವಿಶ್ವಪ್ರಸನ್ನ ಶ್ರೀಗಳು ಚಾತುರ್ಮಾಸ್ಯ ಕಾರ್ಯಕ್ರಮವನ್ನು ಮುಗಿಸಿ ದೆಹಲಿಯಲ್ಲಿರುವ ಉಡುಪಿ ಮಠಕ್ಕೆ ಭೇಟಿ ನೀಡಿದ್ದರು. ಶ್ರೀಗಳಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಕ್ತರು ಶ್ರೀಗಳ ತುಲಾಭಾರ ಸೇವೆ ಆಯೋಜಿಸಿದ್ದರು.

ದೆಹಲಿಯ ಮಠದಲ್ಲಿ ಶ್ರೀಗಳ ತುಲಾಭಾರ ನಡೆಯುತ್ತಿದ್ದಾಗ ಏಕಾಏಕಿ ತುಲಾಭಾರ ತಕ್ಕಡಿ ಹಗ್ಗ ತುಂಡಾಗಿ ತಕ್ಕಡಿ ಸರಳು ಶ್ರೀಗಳ ತಲೆಯಮೇಲೆ ಬಿದ್ದಿದೆ. ಶ್ರೀಗಳ ತಲೆಗೆ ಸ್ವಲ್ಪ ಗಾಯವಾಗಿದೆ. ಅದೃಷ್ಟವಶಾತ್ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ.

ಘಟನೆ ಬಳಿಕ ಪ್ರತಿಕ್ರಿಯಿಸಿರುವ ವಿಶ್ವಪ್ರಸನ್ನ ಶ್ರೀಗಳು, ಯಾರೂ ಆತಂಕ ಪಡುವ ಅಗತ್ಯವಿಲ್ಲ, ಆಗಿದ್ದ ಸಣ್ಣ ಗಾಯ ಮಾಸಿದ್ದು, ನಾನು ಆರಾಮವಾಗಿ, ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.

Home add -Advt


Related Articles

Back to top button