Karnataka NewsLatest

ಜೂ.30ರಿಂದ ಮತ್ತೆ ಪಿಂಚಣಿ ಅದಾಲತ್ ನಡೆಸಲಿದ್ದಾರೆ ಹೆಬ್ಬಾಳಕರ್

 
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ಬೆಳಗಾವಿ ತಾಲ್ಲೂಕಿನ ಗ್ರಾಮೀಣ ವಿಧಾನಸಭಾ ಮತ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿರುವ ಪಿಂಚಣಿ ಅದಾಲತ್ ಕಾರ್ಯಕ್ರಮ ಭಾನುವಾರ ಮತ್ತೆ ಆರಂಭವಾಗಲಿದೆ.

ಈಗಾಗಲೆ ತಲಾ 3 ಗ್ರಾಮಗಳಂತೆ 2 ಬಾರಿ ಅದಾಲತ್ ನಡೆಸಿ 1200ಕ್ಕೂ ಹೆಚ್ಚು ಜನರಿಗೆ ಪಿಂಚಣಿ ಸೌಲಭ್ಯ  ಕಲ್ಪಿಸಿರುವ ಹೆಬ್ಬಾಳಕರ್,  ಜೂ. 30ರಂದು ಕಂಗ್ರಾಳಿ ಬಿ.ಕೆ ನಲ್ಲಿರುವ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ, ಜುಲೈ 1ರಂದು ಬೆಳವಟ್ಟಿಯ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಹಾಗೂ 2 ರಂದು ಕಲ್ಲೇಹೋಳ ಕಲ್ಮೇಶ್ವರ ದೇವಸ್ಥಾನದಲ್ಲಿ ಮುಂಜಾನೆ 10 ಗಂಟೆಗೆ ಅದಾಲತ್ ನಡೆಸುವರು.

ಸಾಮಾಜಿಕ ಯೋಜನೆಯಡಿ ವಿವಿಧ ಮಾಸಿಕ ಪಿಂಚಣಿ ಪ್ರಕರಣಗಳ ಕುರಿತು ಪಿಂಚಣಿ ಅದಾಲತ್‌ನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕರು ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಅಥವಾ ದೂರುಗಳು ಏನಾದರೂ ಇದ್ದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು.

Home add -Advt

Related Articles

Back to top button