Kannada NewsLatest

ಕ್ಷೇತ್ರದ ಜನತೆ ಪ್ರೀತಿ, ಪ್ರೋತ್ಸಾಹ ಕೃತಾರ್ಥ ಭಾವನೆ ಹುಟ್ಟಿಸಿದೆ: ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನಪ್ರತಿನಿಧಿಯಾಗಿ ಎಲ್ಲರ ಪ್ರೀತಿ, ಪ್ರೋತ್ಸಾಹ  ಸಂಪಾದಿಸಿಸುವ ಅವಕಾಶ ಲಭಿಸಿರುವುದು ಜನ್ಮಗಳ ಪುಣ್ಯ ಎನ್ನುವ ಭಾವನೆ ಹುಟ್ಟಿಸಿದೆ ಎಂದು  ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಸ್ ಕೆ ಎಚ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಕ್ಷೇತ್ರದ ಪ್ರತಿ ಗ್ರಾಮಕ್ಕೂ ನಾನು ಭೇಟಿ ಕೊಟ್ಟ ಸಮಯದಲ್ಲಿ ಮಹಿಳೆಯರು ಮನೆಯ ಮಗಳಂತೆ ಬರಮಾಡಿಕೊಳ್ಳುತ್ತಿದ್ದು, ಹರಸಿ ಆಶೀರ್ವದಿಸುತ್ತಿದ್ದಾರೆ. ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳ ಮೂಲಕ ಅರಿಶಿಣ ಕುಂಕುಮ ಕೊಟ್ಟು ಉಡಿಯನ್ನು ತುಂಬುತ್ತಿದ್ದಾರೆ. ಇದು ಕೃತಾರ್ಥ ಭಾವನೆ ಹುಟ್ಟುಹಾಕಿದೆ,” ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ‌ ಮಹಿಳೆಯರು, ಗ್ರಾಮದ ಹಿರಿಯರಾದ ಭರ್ಮಾ‌ ಶೀಗಿಹಳ್ಳಿ, ಇನಾಯತ್ ಅಲಿ ಅತ್ತಾರ, ಕಲ್ಲಪ್ಪ ವನ್ನೂರ, ಮನ್ಸೂರ್ ಅಲಿ ಅತ್ತಾರ, ಗೌಸ್ ಶಿಂಪಿ, ಪ್ರಶಾಂತ ಪಾಟೀಲ, ಸೋಮಶೇಖರ್ ಪಾಟೀಲ, ಪರ್ವತಗೌಡ ಪಾಟೀಲ, ಶಂಕರಗೌಡ ಪಾಟೀಲ, ರಾಮನಗೌಡ ಪಾಟೀಲ, ಭೀಮಶಿ ಹಾದಿಮನಿ, ಶಂಕರಗೌಡ ಗಿಡ್ಡಬಸಣ್ಣರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ರಥದ ಶೆಡ್ ಉದ್ಘಾಟನೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಸ್ ಕೆ ಎಚ್ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದ ರಥದ ಶೆಡ್ ನಿರ್ಮಾಣ ಮಾಡಿಕೊಟ್ಟು   ಅದನ್ನು ಶನಿವಾರ ಉದ್ಘಾಟಿದರು.

ಈ ಸಂದರ್ಭದಲ್ಲಿ ಗ್ರಾಮದ‌ ಮಹಿಳೆಯರು, ಹಿರಿಯರಾದ ಸೋಮಶೇಖರ್ ಪಾಟೀಲ, ಶಂಕರಗೌಡ ನಿಂಗನಗೌಡ ಪಾಟೀಲ, ಅರ್ಜುನ ಬಲಾರಿ, ರಾಮಪ್ಪ ತಳವಾರ, ರಾಮನಗೌಡ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳನ್ನು ನೋಡಲು ಬಿಡಲಿಲ್ಲ ಎಂದು ಮನೆಗೆ ಬೆಂಕಿಯಿಟ್ಟ ಭೂಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button