Karnataka NewsLatest

ಇಲ್ಲಿಯ ಜನ 23 ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ! : ಅಭಿವೃದ್ಧಿಯ ದೀಪ ಹಚ್ಚಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಬಿ.ಕೆ.ಕಂಗ್ರಾಳಿಯ ಕಲ್ಮೇಶ್ವರ ನಗರ ಈವರೆಗೂ ಶಾಪಗ್ರಸ್ತ ಬಡಾವಣೆಯಂತಿತ್ತು. ಇಲ್ಲಿನ ಜನರೇ ಹೇಳುವ ಪ್ರಕಾರ ಕಳೆದ 23 ವರ್ಷಗಳಿಂದ ಯಾವೊಂದು ಅಭಿವೃದ್ಧಿ ಕೆಲಸಗಳೂ ಇಲ್ಲಿ ಆಗಿಲ್ಲ. ಇಲ್ಲಿನ ಅನೇಕ ಯುವಕರು ತಮ್ಮ ಪ್ರದೇಶದಲ್ಲಿ ಸರಕಾರದ ಯಾವುದೇ ಯೋಜನೆ ಬಂದಿದ್ದನ್ನೇ ನೋಡಿಲ್ಲವಂತೆ.
 ಕಳೆದ 23 ವರ್ಷಗಳಿಂದಲೂ ಕೊನೆಯ ಪಕ್ಷ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನಾದರೂ ಮಾಡಿಕೊಡಿ ಎಂದು ಇಲ್ಲಿನ ನಿವಾಸಿಗಳು ದುಂಬಾಲು ಬಿದ್ದಿದ್ದರು. ಆದರೆ ಯಾರಿಂದಲೂ ವರ ಸಿಕ್ಕಿರಲಿಲ್ಲ. ಮತ ಕೇಳಲು ಬರುವ ಜನಪ್ರತಿನಿಧಿಗಳು ಇವರ ಗೋಳು ಕೇಳುವ ಗೋಜಿಗೆ ಹೋಗುತ್ತಿರಲಿಲ್ಲ. 
 
ಇದೀಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಲ್ಲಿನ ರಸ್ತೆ ಹಾಗೂ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿದರು. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತೇನೆ. ಜನರು ಭ್ರಮನಿರಸನಗೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಆಶಿರ್ವಾದ ಇದ್ದರೆ ಬಡಾವಣೆಯನ್ನು ಮಾದರಿಯನ್ನಾಗಿ ಪರಿವರ್ತಿಸಲೂ ಸಿದ್ದನಿದ್ದೇನೆ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾಮಗಾರಿಯ ಪೂಜೆ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷ ದತ್ತಾ ಪಾಟೀಲ, ಉಪಾಧ್ಯಕ್ಷ ಬಂಡೆ ನವಾಜ್, ಉಮೇಶ ನಾಯಕ, ಚೇತನ, ಅನಿಲ ಪಾವಸೆ, ಬಾಹುರಾವ್ ಪಾಟೀಲ, ರೇಖಾ ಕಾಂಬಳೆ, ಸನದಿ, ಇನಾಮದಾರ, ಅಡಿವೆಪ್ಪ ಹತ್ತರಗಿ, ಸಿದ್ದರಾಯ ಬೆಳಗಾವಿ, ನಿಂಗಪ್ಪ ಬೆಳಗಾವಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button