Kannada NewsKarnataka NewsLatest

ಹಿಂದೂ ಪದ ಅಶ್ಲೀಲ ಎನ್ನುವ ಜನರ ಮನಸ್ಥಿತಿಯನ್ನ ಜನರು ಅರಿತುಕೊಳ್ಳಬೇಕು: ಸಚಿವೆ ಶಶಿಕಲಾ ಜೊಲ್ಲೆ

  ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡುತ್ತಾರೆ

 

ಪ್ರಗತಿವಾಹಿನಿ ಸುದ್ದಿ,  ನಿಪ್ಪಾಣಿ : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಂಬಿಕೆಯನ್ನ ಕೀಳು ಪದಗಳಿಗೆ ಹೋಲಿಸಿರುವ ಸತೀಶ್‌ ಜಾರಕೀಹೊಳಿ ಅವರ ಮನಸ್ಥಿತಿಯನ್ನು ಜನರು ಅರಿತುಕೊಳ್ಳಬೇಕಾಗಿದೆ, ಹಿಂದುತ್ವ ಎನ್ನುವುದು ಬಹುಜನರ ಧಾರ್ಮಿಕ ನಂಬಿಕೆ. ಬಹುಸಂಖ್ಯಾತರ ಭಾವನೆಗೆ ಜಾರಕಿಹೊಳಿ ಧಕ್ಕೆ ತಂದಿದ್ದಾರೆ. ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡುತ್ತಾರೆ  *ಎಂದು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಅ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ*.
ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾದ ಶಾಸಕ ಸತೀಶ್‌ ಜಾರಕಿಹೊಳಿ ಹಿಂದೂ ಧರ್ಮದ ಕುರಿತಾಗಿ ನಿಪ್ಪಾಣಿಯಲ್ಲಿ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಪೂರ್ವಜರು ನಂಬಿ, ಬಾಳಿ ಬದುಕಿದ ವ್ಯವಸ್ಥೆಯನ್ನೇ ಕೀಳಾಗಿ ಪ್ರತಿಬಿಂಬಿಸಿರುವ ಸತೀಶ್‌ ಜಾರಕಿಹೊಳಿಯವರ ಮನಸ್ಥಿತಿಯ ಬಗ್ಗೆ ನನಗೆ ವಿಷಾಧವಿದೆ. ಹಿಂದೂ ಧರ್ಮ ಮತ್ತು ನಮ್ಮ ಭಾರತದ ಇತಿಹಾಸದ ಬಗ್ಗೆ ಸತೀಶ್‌ ಜಾರಕಿಹೊಳಿಯವರು ಇನ್ನಷ್ಟು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಒಂದು ಪಕ್ಷದ ಸಿದ್ದಾಂತಗಳನ್ನು ವಿರೋಧಿಸುವ ಭರದಲ್ಲಿ ಭಾರತ ದೇಶದ ಅವಿಭಾಜ್ಯ ಅಂಗವಾಗಿರುವ ಹಿಂದುಗಳನ್ನ ಅವಹೇಳನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಕೆಲವೊಂದು ಹೇಳಿಕೆಗಳು ಕೇವಲ ಅವರ ವೈಯಕ್ತಿಕ ಮಟ್ಟವನ್ನು ತೋರಿಸುವುದಲ್ಲದೇ, ಅವರು ಪ್ರತಿನಿಧಿಸುವ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತವೆ. ಹಿಂದುತ್ವ ಎನ್ನುವುದು ಬಹುಜನರ ಧಾರ್ಮಿಕ ನಂಬಿಕೆ. ಬಹುಸಂಖ್ಯಾತರ ಭಾವನೆಗೆ ಜಾರಕಿಹೊಳಿ ಧಕ್ಕೆ ತಂದಿದ್ದಾರೆ. ಹಿಂದೂ ವಿರೋಧಿ ಹೇಳಿಕೆಗೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದಿದ್ದಾರೆ.
ಸತೀಶ್‌ ಜಾರಕಿಹೊಳಿಯವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಇಂತಹ ಕೀಳುಮಟ್ಟದ ಹೇಳಿಕೆಯನ್ನು ನೀಡಿರುವ ಅವರು ಸಾರ್ವಜನಿಕವಾಗಿ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button