Belagavi NewsBelgaum NewsKannada NewsKarnataka News
*ರಸ್ತೆ ಮೇಲೆ ಡಿಸೇಲ್ ಸೋರಿ ಜಾರಿ ಬಿದ್ದ ಜನ: ಹಿಂದೆ ಕೇ ಫರೀಷ್ತೆ ಫೌಂಡೇಶನ್ ಸದಸ್ಯರ ಮಾನವಿ ಕಾರ್ಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಸೇಲ್ ಟ್ಯಾಂಕರ್ ನಿಂದ ರಸ್ತೆಯ ಮೇಲೆ ಡಿಸೇಲ್ ಸೋರಿಕೆ ಆಗಿದ್ದರಿಂದ ಹಲವಾರು ಬೈಕ್ ಸವಾರರು ಜಾರಿ ಬಿದ್ದಿದ್ದು, ಹಿಂದೆ ಕೇ ಫರೀಷ್ತೆ ಫೌಂಡೇಶನ್ ಸದಸ್ಯರು ಸೋರಿಕೆ ಆಗಿದ್ದ ಡಿಸೇಲ್ ಮೇಲೆ ಮಣ್ಣು ಹಾಕಿ ಮತ್ತೆ ಯಾರು ಬೀಳದಂತಹ ಸಮಾಜ ಮುಖಿ ಕಾರ್ಯ ಮಾಡಿದ್ದಾರೆ.
ಇಂದು ಬೆಳಗಾವಿಯ ಹಿಂಡಲಗಾ ಬ್ರಿಡ್ಜ್ ಬಳಿ ಕಿಲೋಮೀಟರ್ ಗಟ್ಟಲೆ ಡಿಸೇಲ್ ಟ್ಯಾಂಕರ್ ನಿಂದ ರಸ್ತೆಯ ಮೇಲೆ ಡಿಸೇಲ್ ಸೋರಿ ಹಲವಾರು ಬೈಕ್ ಸವಾರರು ಬಿದ್ದಿದ್ದಾರೆ. ಇದೆ ಮಾರ್ಗವಾಗಿ ತೆರಳುತ್ತಿದ್ದ ಹಿಂದೆ ಕೇ ಫರೀಷ್ತೆ ಫೌಂಡೇಶನ್ ಚೇರ್ಮನ್ ಕಲಮುದ್ದೀನಶಾ ಮಕಾನದಾರ ಹಾಗೂ ಸದಸ್ಯರು ರಸ್ತೆಯ ಮೇಲೆ ಸೋರಿದ ಡಿಸೇಲ್ ಮೇಲೆ ಮಣ್ಣು ಹಾಕಿ ಮತ್ತೆ ಅವಘಡ ಸಂಭವಿಸಿದಂತೆ ಎಚ್ಚರಿಕೆ ವಹಿಸಿದ್ದಾರೆ. ಇದೇ ವೇಳೆ ಜಾರಿ ಬಿದ್ದಿದ್ದ ಬೈಕ್ ಸಾವಾರರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಿ ಮನವೀಯತೆ ಮೇರೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ