Kannada NewsLatestNational

*ಪೆಪ್ಪರ್ ಪ್ರೈ ಸಿಇಒ ಹೃದಯಾಘಾತದಿಂದ ನಿಧನ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪೆಪ್ಪರ್ ಪ್ರೈ ಸಹಸಂಸ್ಥಾಪಕ ಹಾಗೂ ಸಿಇಒ ಹೃದಯಾಘಾತದಿಂದ ನಿಧನಹೊಂದಿದ್ದಾರೆ.

ಆನ್ ಲೈನ್ ಫರ್ನಿಚರ್ ಸ್ಟೋರ್ ಪೆಪ್ಪರ್ ಪ್ರೈ ಸಿಇಒ 51 ವರ್ಶದ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ಲೇಹ್ ನಲ್ಲಿ ವಿಧಿವಶರಾಗಿದ್ದಾರೆ. ಈ ಬಗ್ಗೆ ಪೆಪ್ಪರ್ ಪ್ರೈ ಇನ್ನೋರ್ವ ಸಹಸಂಸ್ಥಾಪಕ ಆಶಿಶ್ ಶಾ ಮಾಹಿತಿ ನೀಡಿದ್ದಾರೆ.

Home add -Advt

ನಿನ್ನೆ ರಾತ್ರಿ ಅಂಬರೀಶ್ ಮೂರ್ತಿ ಹೃದಯ ಸ್ತಂಬನದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಅಂಬರೀಶ್ ಮೂರ್ತಿ 1996ರಲ್ಲಿ ಕ್ಯಾಡ್ಬರಿಯಲ್ಲಿ ಮಾರಾಟ ಮತ್ತು ಮಾರ್ಕೆಟಿಂಗ್ ವೃತ್ತಿ ಆರಂಭಿಸಿದ್ದರು. ಅಲ್ಲಿ 5 ವರ್ಶ್ಜಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಪ್ರುಡೆನ್ಶಿಯಲ್ ಐಸಿಐಸಿಐ ಗೆ ಸೇರ್ಪಡೆಯಾದರು. ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆ ಉಪಾಧ್ಯಕ್ಷರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ನಂತರ ಒರಿಜಿನ್ ರಿಸೋರ್ಸ್ ಎಂಬ ಸ್ವಂತ ಕಂಪನಿ ಪ್ರಾರಂಭಿಸಿದರು. ಬಳಿಕ 2005ರಲ್ಲಿ ಕಂಪನಿ ಮಾರಾಟ ಮಾಡಿದರು. ಬಳಿಕ ಇಬೇ ಇಂಡಿಯಾ ಸೇರಿದ್ದರು. ಆರು ವರ್ಷಗಳ ಬಳಿಕ 2011ರಲ್ಲಿ ಆಶಿಶ್ ಶಾ ಜೊತೆ ಸೇರಿ ಪೆಪ್ಪರ್ ಪ್ರೈ ಸ್ಥಾಪಿಸಿದ್ದರು.


Related Articles

Back to top button