ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ಇದೀಗ ರಾಜ್ಯದಲ್ಲಿ ಪೆಟ್ರೋಲ್ ದರ ಏರಿಕೆ ಮತ್ತೊಂದು ಆಘಾತ ನೀಡಿದೆ. ರಾಜ್ಯದ ಇನ್ನಷ್ಟು ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ.
ಮೂರು ದಿನಗಳ ಹಿಂದೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್ ದರ ಶತಕದ ಗಡಿ ದಾಟಿದ ಬಗ್ಗೆ ಪ್ರಗತಿವಾಹಿನಿ ವರದಿ ಮಾಡಿತ್ತು. ಬಳ್ಳಾರಿ ಹಾಗೂ ಉತ್ತರ ಕನ್ನಡದಲ್ಲಿ ಕಳೆದ ಭಾನುವಾರವೇ 100 ರೂ. ದಾಟಿತ್ತು,
ಬಳ್ಳಾರಿಯಲ್ಲಿ ಲೀಟರ್ ಪೆಟ್ರೋಲ್ ದರ 100.66 ರೂ. ಆಗಿದ್ದರೆ, ಚಿಕ್ಕಮಗಳೂರಿನಲ್ಲಿ 100.18 ರೂಪಾಯಿಯಾಗಿದೆ. ಶಿವಮೊಗ್ಗದಲ್ಲಿ ಲೀಟರ್ ಪೆಟ್ರೋಲ್ 100.16 ರೂ ಆಗಿದ್ದರೆ ದಾವಣಗೆರೆಯಲ್ಲಿ 100.45 ರೂ. ಆಗಿದೆ.
ಕೋಲಾರದಲ್ಲಿ ಲೀಟರ್ ಪೆಟ್ರೋಲ್ 99.10 ರೂ, ಕೊಡಗು 99.81 ರೂ, ಬೀದರ್ 99.61 ರೂ, ಬಾಗಲಕೋಟೆ 99.19 ರೂ, ಯಾದಗಿರಿ 99.07ರೂ, ಹಾವೇರಿ ಜಿಲ್ಲೆಯಲ್ಲಿ 99.30 ರೂ, ಬೆಳಗಾವಿಯಲ್ಲಿ 98.30 ರೂ. ಆಗಿದೆ.
ಶಾಸಕರ ನಿಧಿಯಿಂದ 3 ಅಂಬುಲನ್ಸ್ ನೀಡಿದ ಆನಂದ ಮಾಮನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ