Latest

100 ರೂಪಾಯಿ ಗಡಿ ತಲುಪಿದ ಪೆಟ್ರೋಲ್ ದರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಡಿಸೆಲ್ ದರ ಗಗನಮುಖಿಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಶತಕ ಬಾರಿಸಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ಬರೋಬ್ಬರಿ 98ರೂಪಾಯಿ 19 ಪೈಸೆಯಾಗಿದೆ. ಲೀಟರ್ ಡೀಸೆಲ್ ದರ 90 ರೂಪಾಯಿ 84 ಪೈಯಾಗಿದೆ. ಕೊರೊನಾ ಲಾಕ್ ಡೌನ್ ನಿಂದ ಜನ ಸಾಮಾನ್ಯರ ಬದುಕು ದುಸ್ಥರವಾಗಿದ್ದು, ಈ ನಡುವೆ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದು ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಮುಂಬೈ ಮಹಾನಗರದಲ್ಲಿ ಲೀಟರ್ ಪೆಟ್ರೋಲ್ 101ರೂ ಆಗಿದ್ದರೆ, ತೆಲಂಗಾಣ, ಹೈದರಾಬಾದ್ ನಲ್ಲಿ ಕೂಡ ಲೀಟರ್ ಪೆಟ್ರೋಲ್ ದರ 100 ರೂ ಗಡಿ ದಾಟಿದೆ. ದೆಹಲಿಯಲ್ಲಿ 95 ರೂ ಆಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ : ಸುರೇಶ ಕುಮಾರ ಸೂಚನೆ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button