Latest

ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರೀ ಏರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಒಂದೆಡೆ ಕೊರೊನಾ ಸಂಕಷ್ಟಕ್ಕೆ ಜನರು ತತ್ತರಿಸಿ ಹೋಗಿದ್ದರೆ ಇನ್ನೊಂದೆಡೆ ಸರ್ಕಾರ ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರಿ ಏರಿಕೆ ಮಾಡಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 22-25 ಪೈಸೆ ಏರಿಕೆ ಮಾಡಿದ್ದರೆ ಡೀಸೆಲ್ ದರ 24-27 ಪೈಸೆ ಏರಿಕೆ ಮಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 92.5 ರೂಪಾಯಿ ಆಗಿದ್ದರೆ ಡಿಸೆಲ್ ದರ 82.61 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 95.11 ರೂ ಇದ್ದರೆ ಡೀಸೆಲ್ 87.57 ರೂಪಾಯಿ ಆಗಿದೆ. ಭೋಪಾಲ್ ನಲ್ಲಿ ಪೇಟ್ರೋಲ್ ದರ 100.ರೂ ಗಡಿ ದಾಟಿದ್ದು ಲೀಟರ್ ಪೆಟ್ರೋಲ್ ಗೆ 100.8ರೂ ಆಗಿದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್ 98.35 ರೂ ಹಾಗೂ ಡೀಸೆಲ್ 89.75 ರೂ, ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ 92.16 ರೂ ಹಾಗೂ ಡೀಸೆಲ್ ದರ 85.45ರೂ ಚೆನ್ನೈನಲ್ಲಿ 93.84 ರೂ ಹಾಗೂ 87.49 ರೂ ಆಗಿದೆ.
 ವಿನೋದ್ ಸವದಿ ಕೊರೋನಾಕ್ಕೆ ಬಲಿ

Home add -Advt

Related Articles

Back to top button