Belagavi NewsBelgaum NewsKarnataka NewsLatestSports

*ಫೀನಿಕ್ಸ್ ಕಪ್ ಅಂತರಶಾಲಾ ಟೇಬಲ್ ಟೆನಿಸ್ ಸ್ಪರ್ಧೆಗೆ ಉತ್ಸಾಹಭರಿತ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಫೀನಿಕ್ಸ್ ಸ್ಪೋರ್ಟ್ಸ್ ಕೌನ್ಸಿಲ್ ವತಿಯಿಂದ ಆಯೋಜಿಸಲಾದ ಅಂತರಶಾಲಾ ಟೇಬಲ್ ಟೆನಿಸ್ ಸ್ಪರ್ಧೆಗೆ ಶುಕ್ರವಾರ ಉತ್ಸಾಹಭರಿತ ಚಾಲನೆ ದೊರೆಯಿತು. ಈ ಸ್ಪರ್ಧೆಯಲ್ಲಿ 12 ಶಾಲಾ ತಂಡಗಳು ಭಾಗವಹಿಸಿದ್ದು, ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿ ಪಂದ್ಯಾವಳಿಗಳು ನಡೆಯುತ್ತಿವೆ.

ಶಾಲೆಯ ಮಲ್ಟಿಪರ್ಪಸ್ ಹಾಲ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಹಾಕಾಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿವೇಕರಾವ್ ಪಾಟೀಲ್, ಡಾ. ವರ್ಷಾ ಪಾಟೀಲ್, ಎ.ಆರ್. ಪಾಟೀಲ್, ಬಸಂತ್ ಸಿಂಗ್, ಪ್ರಾಂಶುಪಾಲರಾದ ಶ್ರೀಮತಿ ನಿಶಾ ರಾಜೇಂದ್ರನ್, ಸರ್ಪೋನಿಸಾ ಸುಭೇದಾರ್, ಡಾ. ಶಿವಕುಮಾರ ರೇವಶೆಟ್ಟಿ, ಮಹಾಂತೇಶ ಗವಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಅತಿಥಿಗಳು ಟೇಬಲ್ ಟೆನಿಸ್ ನೆಟ್‌ಗೆ ಪುಷ್ಪಹಾರ ಅರ್ಪಿಸಿ ಗೌರವ ಸಲ್ಲಿಸಿದರು. ಡಾ. ಶಿವಕುಮಾರ ಅವರಿಂದ ತೆಂಗಿನಕಾಯಿ ಒಡೆದು ಸ್ಪರ್ಧೆಗೆ ಚಾಲನೆ ನೀಡಲಾಯಿತು.

Home add -Advt

17 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಕೆಎಲ್‌ಇ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಫೀನಿಕ್ಸ್ ಪಬ್ಲಿಕ್ ರೆಸಿಡೆನ್ಸಿ ಸ್ಕೂಲ್ ತಂಡಗಳು ಫೈನಲ್ ಪ್ರವೇಶಿಸಿವೆ.

14 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಫೀನಿಕ್ಸ್ ಪಬ್ಲಿಕ್ ರೆಸಿಡೆನ್ಸಿ ಸ್ಕೂಲ್ ಹಾಗೂ ಕೆಎಲ್‌ಇ ಇಂಟರ್‌ನ್ಯಾಷನಲ್ ಸ್ಕೂಲ್ ತಂಡಗಳು ಅಂತಿಮ ಸುತ್ತಿಗೆ ತಲುಪಿವೆ.

14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಕೆಎಲ್‌ಇ ಇಂಟರ್‌ನ್ಯಾಷನಲ್ ತಂಡವು ಫೀನಿಕ್ಸ್ ರೆಸಿಡೆನ್ಸಿ ಸ್ಕೂಲ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಫೀನಿಕ್ಸ್ ಪಬ್ಲಿಕ್ ಸ್ಕೂಲ್ ತಂಡವು ಕೆಎಲ್‌ಇ ಇಂಟರ್‌ನ್ಯಾಷನಲ್ ಸ್ಕೂಲ್ ತಂಡವನ್ನು ಮಣಿಸಿ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಉಳಿದ ಅಂತಿಮ ಪಂದ್ಯಗಳು ಜೂನ್ 20, ಶನಿವಾರ ನಡೆಯಲಿವೆ.

Related Articles

Back to top button