
ಪ್ರಗತಿವಾಹಿನಿ ಸುದ್ದಿ: ಸಚಿವರು, ಶಾಸಕರ ಫೋನ್ ಟ್ಯಾಪಿಂಗ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಚಿವರ, ಶಾಸಕರ ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ಈವರೆಗೆ ಯಾರೂ ಯಾವುದೇ ದೂರು ನೀಡಿಲ್ಲ. ನಾನಾಗಲಿ, ಸಿಎಂ ಸಿದ್ದರಾಮಯ್ಯ ಅವರಾಗಲಿ ಈ ಬಗ್ಗೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಎಂದು ಹೇಳಿದರು.
ಇನ್ನು ಸರ್ಕಾರ, ಇಂಟಲಿಜನ್ಸ್ ಏಜೆನ್ಸಿಗಳು ಫೋನ್ ಟ್ಯಪ ಮಾಡಬಹುದು. ತನಿಖೆಯ ಒಂದು ಭಾಗವಾಗಿ ಫೋನ್ ಟ್ಯಾಪ್ ಮಾಡುವ ಸ್ವಾತಂತ್ರ್ಯವಿದೆ. ಆದರೆ ಇಂತಹ ಯಾವುದೇ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ಸಚಿವರು, ಶಾಸಕರು ಈ ಬಗ್ಗೆ ದೂರು ನೀಡಿದರೆ ಪರಿಶೀಲಿಸಲಾಗುವುದು ಎಂದರು.