Belagavi NewsBelgaum News

*ಬೆಳಗಾವಿ: ಫೋಟೋಗ್ರಾಫರ್ ಕಿಡ್ನ್ಯಾಪ್ ಮಾಡಿ ಹಲ್ಲೆ: ಮಹಿಳೆ ಸೇರಿ 8 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ: ಮದುವೆಯ ಫೋಟೋಗ್ರಾಫರ್ ಆಗಿ ಬಂದಿದ್ದ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಹಲ್ಲೆರ್ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಉಮೇಶ್ ಹಲ್ಲೆಗೊಳಗಾದ ಫೋಟೋಗ್ರಾಫರ್. ಬೈಲಹೊಂಗಲ ಪಟ್ಟಣದವನಾದ ಉಮೇಶ್, ನಾಲ್ಕು ದಿನಗಳ ಹಿಂದೆ ಬೆಳಗಾವಿ ನಗರದ ಕೆಪಿಟಿಸಿಎಲ್ ಕಲ್ಯಾಣ ಮಂಟಪಕ್ಕೆ ಮದುವೆ ಆರ್ಡರ್ ಇದೆ ಎಂದು ಫೋಟೋಗ್ರಾಫರ್ ಆಗಿ ಬಂದಿದ್ದ. ಈ ವೇಳೆ ನಾಲ್ವರ ಗುಂಪು ಉಮೇಶ್ ನನ್ನು ಕಿಡ್ನ್ಯಾಪ್ ಮಾಡಿ ಕಾರಲ್ಲಿ ಕರೆದೊಯ್ದಿದ್ದರು.

ಹೋಗೆ ಕರೆದೊಯ್ದ ಗ್ಯಾಂಗ್, ಉಮೇಶ್ ಮೇಲೆ ರಾಡ್ ನಿಂದ ಹೊಡೆದು, ಬೈಲಹೊಂಗಲ ತಾಲೂಕಿನ ಚವಟಗುಂಡಿ ಕ್ರಾಸ್ ಬಳಿ ಕಾರು ನಿಲ್ಲಿಸಿ ಬಿಟ್ಟು ಹೋಗಿದ್ದರು.

Home add -Advt

ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ.

ಉಮೇಶ್ ಹೆಣ್ಣುಮಕ್ಕಳನ್ನು ಕಾಡಿಸುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ವಿಕ್ಕಿ, ಪ್ರವೀಣ್, ಉಮಾರಾಣಿ, ಬಸವರಾಜ್ ನರಟ್ಟಿ ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button