ಪ್ರಗತಿ ವಾಹಿನಿ ಸುದ್ದಿ, ಖಾನಾಪುರ:
ಖಾನಾಪುರದ ಶುಭಂ ಗಾರ್ಡನ್ ಹಾಲ್‍ನಲ್ಲಿ ಮಂಗಳವಾರ, ಖಾನಾಪುರ ತಾಲೂಕು ವಿಡಿಯೋಗ್ರಾಫರ್ಸ್ ಹಾಗೂ ಫೋಟೊಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬೆಳಗಾವಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್, ಛಾಯಾಚಿತ್ರಗ್ರಾಹಕರು ಅಸಂಘಟಿತ ವಲಯದವರಾಗಿದ್ದು ಸರಕಾರ ಇವರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಫೋಟೊಗ್ರಾಫರ್‍ಗಳು ಹೆಚ್ಚು ಸಂಘಟಿತರಾಗಬೇಕು. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಉತ್ತಮ ಕೌಶಲ್ಯ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಖಾನಾಪುರ ಬಿಜೆಪಿ ಅಧ್ಯಕ್ಷ ಸಂಜಯ ಕುಬಾಲ್, ಬಿಜೆಪಿ ಮುಖಂಡರಾದ ವಿಠ್ಠಲ ಹಲಗೇಕರ್, ಪ್ರಮೋದ ಕೋಚೇರಿ ಮೊದಲಾದವರು ಮಾತನಾಡಿದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡ ಛಾಯಾಚಿತ್ರಗ್ರಾಹಕರಿಗೆ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ವಿತರಿಸಲಾಯಿತು. ಖಾನಾಪುರ ತಾಲೂಕು ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ದೀಪಕ್ ಗುರವ್, ಸಾಮಾಜಿಕ ಕಾರ್ಯಕರ್ತ ರವಿ ಕೊಟಗಿ, ಧ್ಯಾನೇಶ ಔಲಕಾರ್, ಡಿ.ಬಿ. ಪಾಟೀಲ್, ಅಮಿತ್ ಪವಾರ್ ಇತರರು ಇದ್ದರು.
ಸಂಕೇಶ್ವರ ಪೊಲೀಸರ ಕಾರ್ಯಾಚರಣೆ, ಖತರ್ನಾಕ್ ಕಳ್ಳನ ಬಂಧನ
https://pragati.taskdun.com/sankeshar-police-arrested-thiefe-who-robbed-4-houses/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ