ಪ್ರಗತಿವಾಹಿನಿ ಸುದ್ದಿ: ಛತ್ತೀಸ್‌ಗಢದ ಕವಾರ್ಧ ಜಿಲ್ಲೆಯಲ್ಲಿ ಸುಮಾರು 25-30 ಕಾರ್ಮಿಕರಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಾಹ್‌ಪನಿ ಪ್ರದೇಶದ ಕಂದಕಕ್ಕೆ ಉರುಳಿ ಭೀಕರ ಅಪಘಾತ ಸಂಭವಿಸಿದ್ದು, 18 ಕಾರ್ಮಿಕರು ಮೃತಪಟ್ಟಿದ್ದಾರೆ.
ಸೋಮವಾರ ಬೆಳಗಿನ ಜಾವವೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಈ ಅಪಘಾತದಲ್ಲಿ 8 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬೈಗಾ ಬುಡಕಟ್ಟು ಸಮುದಾಯದ 25-30 ಜನರ ಗುಂಪು ಸಾಂಪ್ರದಾಯಿಕ ತೆಂಡು ಎಲೆಗಳನ್ನು ಸಂಗ್ರಹಿಸಿ ಪಿಕಪ್ ಟ್ರಕ್‌ನಲ್ಲಿ ಹಿಂತಿರುಗುತ್ತಿತ್ತು. ಆದರೆ ಬಹಪಾನಿ ಪ್ರದೇಶದ ಬಳಿ 20 ಅಡಿ ಆಳದ ಕಂದಕಕ್ಕೆ ವಾಹನ ಬಿದ್ದಿದೆ. ಈ ವೇಳೆ ಹಲವರಿಗೆ ಗಾಯಗಳಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ವೇಳೆ ಇದ್ದವರೆಲ್ಲರೂ ಎಲ್ಲರೂ ಕುಯಿ ನಿವಾಸಿಗಳು ಎನ್ನಲಾಗಿದೆ.
ಬೈಗಾ ಸಮುದಾಯದವರು ಬೀಡಿ ತಯಾರಿಸುವ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ತೆಂಡು ಎಲೆಗಳನ್ನು ಸಂಗ್ರಹಿಸುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ