
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಡಿಆರ್ ಡಿಒ ಗೆ ಸೇರಿದ ಪೈಲಟ್ ರಹಿತ ವಿಮಾನ ಪತನಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ನಡೆದಿದೆ.
ಡಿ.ಆರ್.ಡಿ.ಒ ಸಿದ್ಧಪಡಿಸಿದ್ದ ತಪಸ್ ಎಂಬ ಡ್ರೋಣ್ ಮಾದರಿಯ ಪೈಲಟ್ ರಹಿತ ವಿಮಾನ ಇದಾಗಿದ್ದು, ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದಾಗ ಪತನಗೊಂಡಿದೆ.
ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಇರುವ ಡಿ.ಆರ್.ಡಿ.ಒ ಈ ವಿಮಾನವನ್ನು ಸಿದ್ಧಪಡಿಸಿತ್ತು. ಮುಂಜಾನೆ ಪರೀಕ್ಷಾರ್ಥ ಹಾರಾಟ ನಡೆಸಿದ್ದ ತಪಸ್ ವಿಮಾನ ನಿಯಂತ್ರಣ ತಪ್ಪಿ ಜಮೀನಿನಲ್ಲಿ ಬಿದ್ದಿದೆ. ಜಮೀನಿನಲ್ಲಿ ಬಿದ್ದಿರುವ ವಿಮನವನ್ನು ನೋಡಲು ಜನಸಾಗರವೇ ಹರಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ