
ಪ್ರಗತಿವಾಹಿನಿ ಸುದ್ದಿ; ಹೊನ್ನಾವರ: ಪೊಲೀಸ್ ಠಾಣೆಯಲ್ಲಿ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಐ, ಪಿಎಸ್ ಐ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪಾಲಿಶ್ ಮಾಡುವ ನೆಪದಲ್ಲಿ ಬಂಗಾರ ಕಳ್ಳತನ ಮಾದುತ್ತಿದ್ದ ಆರೋಪದಲ್ಲಿ ನಿನ್ನೆ ಹೊನ್ನಾವರ ಠಾಣೆ ಪೊಲೀಸರು ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಅವರಲ್ಲಿ ಓರ್ವ ಆರೋಪಿ ನಿನ್ನೆ ಸಂಜೆ ಠಾಣೆಯಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಪ್ರಕರಣ ಸಂಬಂಧ ಈಗ ಹೊನ್ನಾವರ ಪೊಲೀಸ್ ಠಾಣೆಯ ಪಿಐ ಮಂಜುನಾಥ್, ಪಿಎಸ್ ಐ ಮಂಜೇಶ್ವರ್ ಚಂದಾವರ್, ಕಾನ್ಸ್ ಟೇಬಲ್ ಗಳಾದ ಮಹಾವೀರ್, ರಮೇಶ್ ಹಾಗೂ ಸಂತೋಷ್ ಅವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ