Kannada NewsKarnataka NewsLatest

*ರಾಕ್ಷಸ ಪತಿಯಿಂದ ಪತ್ನಿಯ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ; ಹಾಡಹಗಲೇ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದು ಕ್ರೌರ್ಯ*

ಪ್ರಗತಿವಾಹಿನಿ ಸುದ್ದಿ; ಹಾಸನ: ಪತಿಯೊಬ್ಬ ಪತ್ನಿಯನ್ನು ಹಾಡಹಗಲೇ ರಸ್ತೆಯುದ್ದಕ್ಕೂ ಅಟ್ಟಾಡಿಸಿ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ರಾಕ್ಷಸೀ ಪ್ರವೃತ್ತಿ ಮೆರೆದಿರುವ ಘಟನೆ ಹಾಸನ ಜಿಲ್ಲೆಯ ತಿರುಮಲಾಪುರದಲ್ಲಿ ನಡೆದಿದೆ.

ಪತಿ ಶ್ರೀನಿವಾಸ್ ಪತ್ನಿ ಸವಿತಾ ಮೇಲೆೊಂದು ಕೈಯಲ್ಲಿ ಕತ್ತಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ಇನ್ನೊಂದು ಕೈಯಲ್ಲಿದ್ದ ಬಡಿಗೆಯಿಂದಲೂ ಹೊಡೆದಿದ್ದಾನೆ. ಪತ್ನಿ ಸವಿತಾ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡುತ್ತಿದ್ದರೂ ಬಿಡದ ಕ್ರೂರಿ, ಹಿಂಬಾಲಿಸಿಕೊಂಡು ಬಂದು ರಸ್ತೆಯುದ್ದಕ್ಕೂ ಹೊಡೆದಿದ್ದಾನೆ. ಅಂಗಡಿಯೊಂದರ ಬಳಿ ಜನರು ಹಿಂದೆ ಹೋಗಿ ಸವಿತಾ ಅಡಗಿಕೊಂಡಿದ್ದು, ಜನರನ್ನು ಕಂಡು ಪತಿಯ ದೌರ್ಜನ್ಯ ತಣ್ಣಗಾಗಿದೆ.

Home add -Advt

ಪತ್ನಿಯನ್ನು ಅಟ್ಟಟ್ಟಾಡಿಸಿ ಕತ್ತಿಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೌಟುಂಬಿಕ ಕಲಹದಿಂದಾಗಿ ಕಳೆದ ಎರಡು ವರ್ಷಗಳಿಂದ ಪತಿ ಶ್ರೀನಿವಾಸ್ ಹಾಗೂ ಪತ್ನಿ ಸವಿತಾ ದೂರವಿದ್ದರು. ಜೀವನಾಂಶ, ಆಸ್ತಿ ವಿಚಾರವಾಗಿ ಕೇಸ್ ನಡೆದಿತ್ತು. ಪತಿ ಪತ್ನಿ ಸವಿತಾಗೆ ಆಸ್ತಿ ಕೊಡಬೇಕು ಎಂದು ಹೇಳಲಾಗಿತ್ತಾದರೂ ಪತಿಯಿಂದ ಯಾವುದೇ ಆಸ್ತಿ ಬಾರದ ಹಿನ್ನೆಲೆಯಲ್ಲಿ ಸವಿತಾ ಈ ವಿಚಾರ ಮಾತನಾಡಲು ತನ್ನ ಸಹೋದರಿ ಜೊತೆ ಪತಿ ಬಳಿ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಪತಿ ಶ್ರೀನಿವಾಸ್, ಗಲಾಟೆ ಮಾಡಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಸವಿತಾ ಸಹೋದರಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಸವಿತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಶ್ರೀನಿವಾಸ್ ಘಟನೆ ಬಳಿಕ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.

Related Articles

Back to top button