ಪ್ರಗತಿವಾಹಿನಿ ಸುದ್ದಿ : ಲಘು ವಿಮಾನವೊಂದು ಪತನಗೊಂಡು ಎಲ್ಲಾ 10 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಬ್ರೆಜಿಲ್ ನ ಗ್ರಮಡೋ ಬಳಿ ಇಂದು ನಡೆದಿದೆ.
ವಿಮಾನ ನೆಲಕ್ಕೆ ಬೀಳುವ ವೇಳೆ ಎರಡು ಮಹಡಿಯ ಕಟ್ಟಡವೊಂದಕ್ಕೆ ವಿಮಾನ ಡಿಕ್ಕಿ ಹೊಡಿದಿದ್ದು, ಇದರಿಂದಾಗಿ ಹಲವರು ಗಾಯಗೊಂಡಿದ್ದಾರೆ. ವಿಮಾನವು ಬ್ರೆಜಿಲ್ ನ ಉದ್ಯಮಿಯೊಬ್ಬರಿಗೆ ಸೇರಿದ್ದು ಎಂದು ನಾಗರಿಕ ರಕ್ಷಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ಕಟ್ಟಡದಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ