Kannada NewsKarnataka NewsNationalPoliticsTravelWorld

*ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ದ: ಶಾಂತಿ ಮಾತುಕತೆಗೆ ಚೀನಾ ಆಹ್ವಾನ*

ಪ್ರಗತಿವಾಹಿನಿ ಸುದ್ದಿ: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ದದಿಂದ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆ ನಡೆಸಲು ಚೀನಾ  ಮದ್ಯಪ್ರವೇಶಿಸುವುದಾಗಿ ಘೋಷಿಸಿದೆ.

ಈ ಕುರಿತು ಚೀನಾದ ವಿದೇಶಾಂಗ ಸಚಿವ ವಾಂಗಿ ಯಿ ಅವರು ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದು ಈ ವೇಳೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಬಗ್ಗೆ ಚೀನಾ ಗಂಭೀರ ಆತಂಕ ವ್ಯಕ್ತಪಡಿಸಿದೆ.

ಮಾತುಕತೆಯಲ್ಲಿ ವಾಂಗ್ ಯಿ ಅವರು, ಈ ಸಂಘರ್ಷವು ಸೌದಿ ಅರೇಬಿಯಾ ಹಾಗೂ ಇತರ ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸುವುದು ಚೀನಾ ಬಯಸದ ಬೆಳವಣಿಗೆ ಎಂದು ಹೇಳಿದ್ದಾರೆ. 

ಪ್ರಾದೇಶಿಕ ಅಸ್ಥಿರತೆ ಹೆಚ್ಚಾದರೆ ಅದು ಜಾಗತಿಕ ಶಾಂತಿಗೆ ಹಾನಿಕಾರಕವಾಗಬಹುದು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. ಇದೇ ವೇಳೆ, ಉದ್ವಿಗ್ನ ಪರಿಸ್ಥಿತಿಯಲ್ಲೂ ಸೌದಿ ಅರೇಬಿಯಾ ತಾಳ್ಮೆಯಿಂದ ನಡೆದುಕೊಂಡಿರುವುದನ್ನು ಚೀನಾ ಶ್ಲಾಘಿಸಿದೆ. 

ಸಮಸ್ಯೆಗಳನ್ನು ಶಾಂತಿಯುತ ಮಾತುಕತೆಗಳ ಮೂಲಕ ಪರಿಹರಿಸುವ ಸೌದಿ ಸರ್ಕಾರದ ಬದ್ಧತೆಯನ್ನು ಚೀನಾ ಸ್ವಾಗತಿಸಿದೆ. ಜೊತೆಗೆ, ಯುದ್ಧದಲ್ಲಿ ತೊಡಗಿರುವ ಎಲ್ಲಾ ಪಕ್ಷಗಳು ತಕ್ಷಣವೇ ಸೈನಿಕ ದಾಳಿಗಳನ್ನು ನಿಲ್ಲಿಸಿ, ಮಾತುಕತೆ ಮತ್ತು ರಾಜತಾಂತ್ರಿಕ ಸಂವಾದವನ್ನು ಪುನರಾರಂಭಿಸಬೇಕು ಎಂದು ಚೀನಾ ಕರೆ ನೀಡಿದೆ. 

ಮಧ್ಯಪ್ರಾಚ್ಯದ ಭದ್ರತೆ ಮತ್ತಷ್ಟು ಹದಗೆಡದಂತೆ ತಡೆಗಟ್ಟಲು ಎಲ್ಲಾ ದೇಶಗಳು ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೀಜಿಂಗ್ ಸೂಚಿಸಿದೆ.

Related Articles

Back to top button